alex Certify BIG NEWS: ಶಾಲೆಗಳಲ್ಲಿ ಸಂಸ್ಕೃತಿಯ ಕಡ್ಡಾಯ ಶಿಕ್ಷಣ, ದೇವರಿಗೆ ‘ರಾಷ್ಟ್ರೀಯ ಗೌರವ’ ನೀಡಲು ಕಾನೂನು ತರಬೇಕೆಂದು ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಲೆಗಳಲ್ಲಿ ಸಂಸ್ಕೃತಿಯ ಕಡ್ಡಾಯ ಶಿಕ್ಷಣ, ದೇವರಿಗೆ ‘ರಾಷ್ಟ್ರೀಯ ಗೌರವ’ ನೀಡಲು ಕಾನೂನು ತರಬೇಕೆಂದು ಹೈಕೋರ್ಟ್ ಮಹತ್ವದ ತೀರ್ಪು

‘ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ, ಗೀತಾ ಮತ್ತು ಅದರ ಲೇಖಕರಾದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರಿಗೆ ರಾಷ್ಟ್ರೀಯ ಗೌರವ(ರಾಷ್ಟ್ರೀಯ ಸಮ್ಮಾನ್) ನೀಡಲು ಸಂಸತ್ತು ಕಾನೂನನ್ನು ತರುವ ಅವಶ್ಯಕತೆಯಿದೆ, ಏಕೆಂದರೆ ಅವರು ದೇಶದ ಸಂಸ್ಕೃತಿ ಮತ್ತು ಪರಂಪರೆಯಾಗಿದ್ದಾರೆ.’ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ತನ್ನ ತೀರ್ಪಿನಲ್ಲಿ ಹೇಳಿದೆ

ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕಾಗಿ ದಾಖಲಾಗಿರುವ ಹತ್ರಾಸ್ ನ ಆಕಾಶ್ ಜಾಟವ್ ಜಾಮೀನು ಅರ್ಜಿಯನ್ನು ಆಲಿಸುವಾಗ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಾಟವ್ ಕಳೆದ 10 ತಿಂಗಳುಗಳಿಂದ ಜೈಲಿನಲ್ಲಿದ್ದು, ಆತನ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಬೇಕಿದೆ ಎಂದು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ.

ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ, ಗೀತಾ ಮತ್ತು ಅವುಗಳ ಲೇಖಕರಾದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರಿಗೆ ರಾಷ್ಟ್ರೀಯ ಗೌರವ (ರಾಷ್ಟ್ರೀಯ ಸಮ್ಮಾನ್) ನೀಡಲು ಸಂಸತ್ತು ಕಾನೂನನ್ನು ತರುವ ಅವಶ್ಯಕತೆಯಿದೆ, ಏಕೆಂದರೆ ಅವರು ದೇಶದ ಸಂಸ್ಕೃತಿ ಮತ್ತು ಪರಂಪರೆಯಾಗಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

ದೇಶಾದ್ಯಂತ ಶಾಲೆಗಳಲ್ಲಿ ಕಡ್ಡಾಯವಾಗಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಹೇಳಿದೆ.

ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಗವಾನ್ ರಾಮನನ್ನು ನಂಬುವವರ ಪರವಾಗಿ ತನ್ನ ನಿರ್ಧಾರವನ್ನು ನೀಡಿದೆ ಎಂದು ನ್ಯಾಯಾಲಯ ಹೇಳಿದೆ. ರಾಮ ಭಾರತದ ಆತ್ಮ ಮತ್ತು ಸಂಸ್ಕೃತಿ ಮತ್ತು ರಾಮನಿಲ್ಲದೆ ಭಾರತ ಅಪೂರ್ಣ ಎಂದು ನ್ಯಾಯಾಲಯ ಗಮನಿಸಿದೆ.

ಅರ್ಜಿದಾರರ ವಿರುದ್ಧದ ಆರೋಪಗಳ ಮೇಲೆ, ಅನೇಕ ದೇಶಗಳಲ್ಲಿ ಇಂತಹ ನಡವಳಿಕೆಗೆ ಕಠಿಣ ಶಿಕ್ಷೆಯ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಅಂತಹ ವಿಷಯಗಳಲ್ಲಿ ಅಶ್ಲೀಲ ಟೀಕೆ ಮಾಡುವ ಬದಲು ಅವರು ವಾಸಿಸುವ ದೇಶದ ದೇವತೆಗಳು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ಭಾರತದ ಸಂವಿಧಾನವು ಒಬ್ಬ ನಾಸ್ತಿಕನಾಗಲು ಅವಕಾಶ ನೀಡುತ್ತದೆ. ಆದರೆ, ದೇವರು ಮತ್ತು ದೇವತೆಗಳ ವಿರುದ್ಧ ಅಶ್ಲೀಲ ಹೇಳಿಕೆಗಳನ್ನು ನೀಡಬಹುದು ಎಂದು ಇದರ ಅರ್ಥವಲ್ಲ ಎಂದು ನ್ಯಾಯಮೂರ್ತಿ ಯಾದವ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...