ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ವಿಶ್ವದಾದ್ಯಂತ ಅನೇಕ ದೇಶಗಳು ವಿವಿಧ ಆಫರ್ ನೀಡ್ತಿವೆ. ಈ ಮಧ್ಯೆ ಅಡಲ್ಟ್ ನಟಿಯೊಬ್ಬಳು, ವಿಚಿತ್ರ ರೀತಿಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾಳೆ.
ನಟಿ ಹೆಸರು Kazumi Squirts. ಆಕೆ ವಯಸ್ಸು 24. ಈಕೆ ಓನ್ಲಿಫ್ಯಾನ್ಸ್ ವೆಬ್ಸೈಟ್ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಕೊರೊನಾ ಲಸಿಕೆ ಬಗ್ಗೆ ಆಕೆ ವಿಚಿತ್ರ ಆಫರ್ ನೀಡಿದ್ದಾಳೆ. ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಕಜುಮಿ, ನಾನು ಕೊರೊನಾ ಲಸಿಕೆ ಬಗ್ಗೆ ನನ್ನದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಕೊರೊನಾ ಲಸಿಕೆ ಪಡೆದ ನಂತರ ನನಗೆ ಪ್ರಮಾಣಪತ್ರಗಳನ್ನು ಕಳುಹಿಸುತ್ತಿರುವವರಿಗೆ ಬಹುಮಾನವಾಗಿ ನಾನು ನನ್ನ ಉಚಿತ ನಗ್ನ ಫೋಟೋವನ್ನು ಕಳುಹಿಸುತ್ತಿದ್ದೇನೆ ಎಂದಿದ್ದಾಳೆ.
ನಿರೂಪಕ ಡ್ಯಾನಿ ಮುಲ್ಲನ್, ಫೋಟೋ ನೋಡಿದ್ದಾಗಿ ಹೇಳಿದ್ದಾರೆ. ಆದ್ರೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟಿ, ಇಡೀ ವಿಶ್ವದ ಜನರು ಲಸಿಕೆ ತೆಗೆದುಕೊಳ್ಳಬೇಕು. ವಿಶ್ವ ಕೊರೊನಾ ಮುಕ್ತರಾಗಬೇಕೆಂಬುದು ನನ್ನ ಉದ್ದೇಶವೆಂದು ಆಕೆ ಹೇಳಿದ್ದಾಳೆ.
ಮೊದಲು ಶೋರೂಮ್ ಒಂದರಲ್ಲಿ ಈಕೆ ಕೆಲಸ ಮಾಡ್ತಿದ್ದಳಂತೆ. ಪಾರ್ಟಿಯೊಂದಕ್ಕೆ ಹೋದಾಗ ಆಕೆಯ ಖಾಸಗಿ ಫೋಟೋವನ್ನು ವೈರಲ್ ಮಾಡಲಾಗಿತ್ತಂತೆ. ಇದ್ರಿಂದ ಕೆಲಸ ಹೋಯ್ತಂತೆ. ಇದ್ರಿಂದ ಸುಮ್ಮನಿರದ ಕಜುಮಿ, ಯಾವುದು ತನ್ನ ಕೆಲಸ ಕಳೆದಿದೆಯೋ ಅದನ್ನೇ ವೃತ್ತಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದಳಂತೆ. ಆ ನಂತ್ರ ಪೋರ್ನ್ ಉದ್ಯಮಕ್ಕೆ ಕಾಲಿಟ್ಟಳಂತೆ.