ಹಣ ಗಳಿಸೋದು ಹೇಗೆ ಎಂಬ ಆಲೋಚನೆಯಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ ಸೇರುವ ಮೂಲಕ ಸಾಕಷ್ಟು ಹಣ ಗಳಿಸಬಹುದು. ಈಗಾಗಲೇ ಅನೇಕರು ಐ.ಆರ್.ಸಿ.ಟಿ.ಸಿ. ಏಜೆಂಟ್ ಆಗುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಐ.ಆರ್.ಸಿ.ಟಿ.ಸಿ. ರೈಲ್ವೆ ಟಿಕೆಟ್ ಗಳನ್ನು ನೀಡಲು ಏಜೆಂಟ್ ಗಳನ್ನು ಆಯ್ಕೆ ಮಾಡುತ್ತದೆ.
ಏಜೆಂಟ್ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಬುಕ್ಕಿಂಗ್ ಗೆ ಕಮಿಷನ್ ಸಿಗುತ್ತದೆ. ಇದರಲ್ಲಿ, ಸ್ಲೀಪರ್ ಕ್ಲಾಸ್ ಟಿಕೆಟ್ ಬುಕ್ ಮಾಡಲು 20 ರೂಪಾಯಿ ಮತ್ತು ಎಸಿ ಟಿಕೆಟ್ ಬುಕ್ ಮಾಡಲು 40 ರೂಪಾಯಿ ಕಮಿಷನ್ ಸಿಗುತ್ತದೆ.
ಆರ್ಟಿಎಸ್ಎ ಯೋಜನೆಯನ್ನು ಮೂಲತಃ 1985 ರಲ್ಲಿ ಜಾರಿಗೆ ತರಲಾಯಿತು. ಏಜೆಂಟ್ ಬಳಕೆದಾರರು ಲಾಗ್ ಇನ್ ಮಾಡಿದಾಗ, ಐ.ಆರ್.ಸಿ.ಟಿ.ಸಿ. ಅಪ್ಲಿಕೇಶನ್ ಡಿಜಿಟಲ್ ಪ್ರಮಾಣ ಪತ್ರವನ್ನು ದೃಢೀಕರಿಸುತ್ತದೆ. ಐ.ಆರ್.ಸಿ.ಟಿ.ಸಿ. ಏಜೆಂಟ್ ಆಗಿ, ಎಸಿ ತರಗತಿಯಲ್ಲದಿದ್ದರೆ ಪ್ರತಿ ಪಿಎನ್ಆರ್ ಗೆ 20 ರೂಪಾಯಿ ಮತ್ತು ಎಸಿ ವರ್ಗದಲ್ಲಿ ಪ್ರತಿ ಪಿಎನ್ಆರ್ ಗೆ 40 ರೂಪಾಯಿ ಕಮಿಷನ್ ಪಡೆಯಬಹುದು.ಇದನ್ನು ಹೊರತುಪಡಿಸಿ ಏಜೆಂಟ್ ಗಳು 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಹಿವಾಟು ಮಾಡಿದ್ರೆ ಶೇಕಡಾ 1ರಷ್ಟು ಕಮಿಷನ್ ಪಡೆಯುತ್ತಾರೆ.
ಒಂದು ತಿಂಗಳಲ್ಲಿ ಅನಿಯಮಿತ ಸಂಖ್ಯೆಯ ಟಿಕೆಟ್ ಗಳನ್ನು ಬುಕ್ ಮಾಡಬಹುದು. ಏಜೆಂಟರುಗಳು ಪ್ರತಿ ಬುಕಿಂಗ್ ಮತ್ತು ವಹಿವಾಟಿನ ಮೇಲೆ ಕಮಿಷನ್ ಪಡೆಯುತ್ತಾರೆ. ಒಬ್ಬ ಏಜೆಂಟ್ ತಿಂಗಳಿಗೆ 80,000 ರೂಪಾಯಿವರೆಗೆ ನಿಯಮಿತ ಆದಾಯವನ್ನು ಗಳಿಸಬಹುದು. ಕೆಲಸ ನಿಧಾನವಾಗಿದ್ದರೂ ಸರಾಸರಿ, 40-50 ಸಾವಿರ ರೂಪಾಯಿಗಳನ್ನು ಗಳಿಸಬಹುದು.
ಐ.ಆರ್.ಸಿ.ಟಿ.ಸಿ. ಏಜೆಂಟ್ ಆಗಲು ಬಯಸುವವರು 12 ನೇ ತರಗತಿ ಪಾಸ್ ಆಗಿರಬೇಕು ಏಜೆಂಟ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಐ.ಆರ್.ಸಿ.ಟಿ.ಸಿ. ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಇದಕ್ಕಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಮಾನ್ಯ ಇಮೇಲ್ ಐಡಿ, ಫೋಟೋ, ವಸತಿ ವಿಳಾಸ ಪುರಾವೆ ದಾಖಲೆ ಬೇಕು.