ಕೈನಲ್ಲಿ ಸ್ಮಾರ್ಟ್ಫೋನ್ ಇದೆ ಅಂದ್ರೆ ಫೋಟೋ ಗೊತ್ತಿಲ್ಲದೆ ಕ್ಲಿಕ್ ಆಗಿರುತ್ತೆ. ಸೆಲ್ಫಿಯಂತು ಕಾಮನ್. ಆದ್ರೆ ಎಲ್ಲ ಫೋಟೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಕೆಲ ಫೋಟೋಗಳನ್ನು ಖಾಸಗಿಯಾಗಿಟ್ಟುಕೊಳ್ಳಲು ಬಯಸ್ತೇವೆ. ಕೆಲ ಅಪ್ಲಿಕೇಷನ್ ಮೂಲಕ ಫೋಟೋವನ್ನು ಯಾರಿಗೂ ಕಾಣದಂತೆ ಇಡಬಹುದು.
ಈ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಗೂಗಲ್ ಫೋಟೋಸ್ ಆಪ್ ನಲ್ಲಿ ಲಭ್ಯವಿದೆ. ಅನೇಕ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಫೋಟೋಗಳನ್ನು ಮರೆಮಾಡುವ ಆಯ್ಕೆಯನ್ನು ಹೊಂದಿವೆ.ಗೂಗಲ್ ಫೋಟೋಸ್ ಆಪ್ ಅನ್ನು ಗ್ಯಾಲರಿಯಂತೆ ಬಳಸಬಹುದು.
ಗೂಗಲ್ ಫೋಟೋಸ್ ಆ್ಯಪ್ ನಲ್ಲಿ ಫೋಟೋಗಳನ್ನು ಹಾಕಬೇಕು. ಮರೆಮಾಡಲು ಬಯಸುವ ಫೋಟೋಗಳನ್ನು ಆಯ್ಕೆ ಮಾಡಬೇಕು. ನಂತ್ರ ಮೂರು ಡಾಟ್ ಮೆನು ಮೇಲೆ ಕ್ಲಿಕ್ ಮಾಡಬೇಕು.ಆರ್ಕೈವ್‌ಗೆ ಸರಿಸಿ ಎಂಬ ಆಪ್ಶನ್ ಆಯ್ಕೆ ಮಾಡಬೇಕು. ಆಗ ನೀವು ಆಯ್ಕೆ ಮಾಡಿದ ಎಲ್ಲ ಫೋಟೋ ಆರ್ಕೈವ್ ಫೋಲ್ಡರ್ ಸೇರುತ್ತದೆ.
ಮೊಬೈಲ್ ಗ್ಯಾಲರಿಯಲ್ಲಿ 3 ಡಾಟ್ ನಲ್ಲಿನ ಹೈಡ್ ಆಯ್ಕೆಯನ್ನು ಕ್ಲಿಕ್ ಮಾಡಿ ಅದಕ್ಕೆ ಅನುಕೂಲಕರ ಪಾಸ್ವರ್ಡ್ ಹಾಕಿ ಫೋಟೋಗಳನ್ನು ಯಾರಿಗೂ ಕಾಣದಂತೆಮಾಡಬಹುದಾಗಿದೆ.