alex Certify ಜೂಮ್ ಮೀಟಿಂಗ್ ವೇಳೆ ಸಂಗಾತಿ ಜೊತೆ ಶಿಕ್ಷಕನ ಸರಸ..! ಎರಡು ನಿಮಿಷ ಲೈವ್ ಪ್ರಸಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂಮ್ ಮೀಟಿಂಗ್ ವೇಳೆ ಸಂಗಾತಿ ಜೊತೆ ಶಿಕ್ಷಕನ ಸರಸ..! ಎರಡು ನಿಮಿಷ ಲೈವ್ ಪ್ರಸಾರ

ಶಿಕ್ಷಕರ ವೃತ್ತಿಗೆ ಹೆಚ್ಚಿನ ಗೌರವವಿದೆ. ಗುರುವನ್ನು ದೇವರಂತೆ ಕಾಣಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಶಿಕ್ಷಕರ ಅನೇಕ ಸುದ್ದಿಗಳು ವರದಿಯಾಗ್ತಿರುತ್ತವೆ. ಈ ಮಧ್ಯೆ ಜಮೈಕಾದಲ್ಲಿ ಶಿಕ್ಷಕರೊಬ್ಬರು ಮಾಡಿದ ಕೆಲಸ ಸದ್ಯ ಸುದ್ದಿಯಲ್ಲಿದೆ.

ಜೂಮ್ ಅಪ್ಲಿಕೇಷನ್ ನಲ್ಲಿ ಶಿಕ್ಷಕರ ಮೀಟಿಂಗ್ ನಡೆಯುತ್ತಿತ್ತು. ಜಮೈಕಾ ಶಿಕ್ಷಕರ ಸಂಘದ ವಾರ್ಷಿಕ ಸಮ್ಮೇಳನವನ್ನು ಜೂಮ್ ಅಪ್ಲಿಕೇಷನ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಕೊರೊನಾ ಸಾಂಕ್ರಾಮಿಕದಲ್ಲಿ ಶಿಕ್ಷಕರ ಸವಾಲುಗಳ ಬಗ್ಗೆ ಇಲ್ಲಿ ಚರ್ಚೆಯಾಗ್ತಿತ್ತು. ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಹೆಚ್ಚುವರಿ ಬಳಕೆಯ ದುಷ್ಪರಿಣಾಮ ಸೇರಿದಂತೆ ಅನೇಕ ಆಸಕ್ತಿದಾಯಕ ವಿಷ್ಯಗಳು ಚರ್ಚೆಯಾಗ್ತಿದ್ದವು.

ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು, ಕಿವಿಕೊಟ್ಟು ವಿಷ್ಯವನ್ನು ಆಲಿಸ್ತಿದ್ದರು. ಈ ವೇಳೆ ಪ್ರೌಢಶಾಲೆ ಶಿಕ್ಷಕನ ವಿಡಿಯೋ ಎಲ್ಲರ ಮುಜುಗರಕ್ಕೆ ಕಾರಣವಾಯ್ತು. ಮೀಟಿಂಗ್ ವೇಳೆ ಶಿಕ್ಷಕನ ಕ್ಯಾಮರಾ ಆನ್ ಆಗಿದೆ. ಇದು ಶಿಕ್ಷಕನಿಗೆ ತಿಳಿದಿಲ್ಲ. ಆತ, ಮೀಟಿಂಗ್ ವೇಳೆ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸ್ತಿದ್ದ.

2 ನಿಮಿಷಗಳ ಕಾಲ ನೇರಪ್ರಸಾರವನ್ನು ಸಭೆಯಲ್ಲಿದ್ದವರು ನೋಡಿದ್ದಾರೆ. ಶಿಕ್ಷಕನನ್ನು ಎಚ್ಚರಿಸುವ ಪ್ರಯತ್ನ ನಡೆದಿದೆ. ಅದು ಸಾಧ್ಯವಾಗದೆ ಹೋದಾಗ, ಆತನನ್ನು ಮೀಟಿಂಗ್ ನಿಂದ ಹೊರಗಿಟ್ಟಿದ್ದಾರೆ. ಆದ್ರೆ ಘಟನೆ ನಂತ್ರ ಶಿಕ್ಷಕನ ವಿರುದ್ಧ ಶಾಲೆ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯಾಗಿಲ್ಲ. ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆದ್ರೆ ಈಗ ಮತ್ತೆ ಇದ್ರ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...