ಮಂಗನಿಂದ ಮಾನವ ಎಂದು ವಿಜ್ಞಾನ ಸಾಬೀತುಪಡಿಸಿದ್ದರೂ, ಕೆಲವೊಮ್ಮೆ ನಮ್ಮ ಎದುರೇ ಮಂಗಗಳು ಮಾಡುವ ವಿವಿಧ ಕೆಲಸಗಳು ವಿಜ್ಞಾನದ ಸಿದ್ಧಾಂತವನ್ನು ನೆನಪು ಮಾಡಿಕೊಡುವಂತಿರುತ್ತದೆ.
ಮಂಗಗಳು ಪರಸ್ಪರರ ತಲೆಯ ಮೇಲಿನ ಹೇನು ತೆಗೆಯುತ್ತಾ ಕೂರುವುದು. ಎರಡು ಕೈಗಳನ್ನು ಎತ್ತಿಕೊಂಡು ಮನುಷ್ಯರಂತೆ ನಡೆಯುವುದು. ಮಂಗಗಳಲ್ಲೇ ವಿವಿಧ ಪ್ರಭೇದಗಳಿದ್ದು ಆ ಪೈಕಿ ಚಿಂಪಾಂಜಿ ಮತ್ತು ಗೊರಿಲ್ಲಾಗಳು ಮಾನವ ಹಾವಭಾವ ಮತ್ತು ಗಾತ್ರಕ್ಕೆ ಸಮೀಪದ ಹೋಲಿಕೆ ಹೊಂದಿವೆ.
SHOCKING: ರೈಲ್ ನಲ್ಲೇ ಮಹಿಳೆ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ, ಒಳ ಉಡುಪು ಹೊರಗೆಳೆದ NCB ಅಧಿಕಾರಿ ಅರೆಸ್ಟ್
ಇಂಥದ್ದೇ ಚಿಂಪಾಂಜಿಯೊಂದು ಪ್ರಾಣಿ ಸಂಗ್ರಹಾಲಯದಲ್ಲಿ ಥೇಟ್ ಮನುಷ್ಯರಂತೆಯೇ ಬಟ್ಟೆ ಒಗೆಯುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹಳದಿ ಟಿ-ಶರ್ಟ್‌ಗೆ ಸೋಪು ಹಚ್ಚಿದ ಬಳಿಕ ಒಂದು ಬ್ರಷ್ ತೆಗೆದುಕೊಂಡು ಉಜ್ಜುತ್ತಾ ಕೂರುವ ಚಿಂಪಾಂಜಿಯು ಎಲ್ಲ ಕೊಳೆ ಪೂರ್ಣವಾಗಿ ತೆಗೆದುಹಾಕುವ ಸಂಕಲ್ಪ ಹೊಂದಿದೆ.
ಬಳಿಕ ಕೈಗಳಿಂದ ಬಟ್ಟೆಯನ್ನು ಹಿಡಿದುಕೊಂಡು ಮನುಷ್ಯರಂತೆಯೇ ಕುಕ್ಕುವುದು, ಜಾಡಿಸುವುದನ್ನು ಕೂಡ ಮಾಡುವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸಚಿನ್ ಶರ್ಮಾ ಎನ್ನುವವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಇದೆ.
https://youtu.be/JL6x2ze-TA4