ತಮ್ಮ ಪೂರ್ವಜರು ಆರಂಭಿಸಿದ ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯು 70 ವರ್ಷಗಳ ಮುನ್ನ ರಾಷ್ಟ್ರೀಕರಣ ಮೂಲಕ ಸರಕಾರದ ಒಡೆತನಕ್ಕೆ ಮರಳಿದ್ದನ್ನು ಶುಕ್ರವಾರದಂದು ಉದ್ಯಮಿ ರತನ್ ಟಾಟಾ ಮೆಲುಕು ಹಾಕಿದ್ದಾರೆ.
ಇದಕ್ಕೆ ಕಾರಣವಾಗಿದ್ದು, ಸಾಲದ ಸುಳಿಯಲ್ಲಿ ಮುಳುಗಿರುವ ‘ಏರ್ ಇಂಡಿಯಾ’ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಆಹ್ವಾನಿಸಿದ್ದ ಬಿಡ್ ಟಾಟಾ ಸನ್ಸ್ ಸಂಸ್ಥೆಯ ಪಾಲಾಗಿದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಿದ್ದ ಕೂಡಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಜೆ.ಆರ್.ಡಿ. ಟಾಟಾ ಫೋಟೊ ಜತೆಗೆ ತಮ್ಮ ಸಂತಸವನ್ನು ರತನ್ ಹಂಚಿಕೊಂಡಿದ್ದಾರೆ.
ಜೆಹಂಗೀರ್ ರತನ್‌ಜೀ ದಾದಾಭಾಯ್ ಟಾಟಾ (ಜೆ.ಆರ್.ಡಿ. ಟಾಟಾ ) ಅವರು 1932ರಲ್ಲಿ ಆರಂಭಿಸಿದ ಏರ್ ಇಂಡಿಯಾ ಸಂಸ್ಥೆಯ ಮೊದಲ ವಿಮಾನದಿಂದ ಸಾಂಸ್ಕೃತಿಕ ಉಡುಪಿನಲ್ಲಿ ಗಗನಸಖಿಯರು ಇಳಿದು ಬರುತ್ತಿದ್ದಾರೆ. ಅವರ ಎದುರು ಜೆ.ಆರ್.ಡಿ. ಟಾಟಾ ಸಲ್ಯೂಟ್ ಹೊಡೆಯುತ್ತಿದ್ದಾರೆ. ಇಂಥ ಅಪರೂಪದ, ಐತಿಹಾಸಿಕ ಫೋಟೊವನ್ನು ಶುಕ್ರವಾರ ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.
ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಸರಾ ಬಳಿಕ ಬಿಸಿಯೂಟ, 1 – 5 ನೇ ಕ್ಲಾಸ್ ಶುರು
ಜತೆಗೆ ಒಂದು ಸಂದೇಶವನ್ನು ಕೂಡ ಹಂಚಿಕೊಂಡಿರುವ ಅವರು, ʼವೆಲ್‌ಕಮ್ ಬ್ಯಾಕ್ ಏರ್ ಇಂಡಿಯಾʼ ಎಂದು ಟ್ವೀಟ್‌ಗೆ ಶೀರ್ಷಿಕೆ ಕೊಟ್ಟಿದ್ದಾರೆ. ಅದರ ಎದುರು ಮನೆಯ ಚಿಹ್ನೆಯನ್ನು ಹಾಕಿ, ಮನೆಗೆ ಮರಳಿದ ತನ್ನದೇ ಸಂಸ್ಥೆ ಎಂದು ಖುಷಿಪಟ್ಟಿದ್ದಾರೆ.
ಜೆ.ಆರ್.ಡಿ. ಟಾಟಾ ಅವರ ಆಡಳಿತದಲ್ಲಿ ಏರ್ ಇಂಡಿಯಾಗಿದ್ದ ಗತವೈಭವವನ್ನು ಮರುಕಳಿಸಲು ಶ್ರಮಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಆಯ್ದ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ನಿರ್ವಹಣೆ ಹೊರೆಯನ್ನು ಕಡಿತ ಮಾಡಿಕೊಳ್ಳಲು ಮುಂದಾಗಿರುವ ಮೋದಿ ಸರ್ಕಾರದ ನಡೆಯನ್ನು ಕೂಡ ಟಾಟಾ ಹೊಗಳಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: ಸೇವೆ ಮುಂದುವರೆಸಲು ಸರ್ಕಾರದ ನಿರ್ಧಾರ
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್ ಎನಿಸಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ‘ಬ್ರಿಟನ್ ರಾಯಲ್ ಏರ್‌ಫೋರ್ಸ್’ ಗೆ ಅಂದಿನ ಬರ್ಮಾದಲ್ಲಿ ಪೂರಕ ವಿಮಾನಗಳನ್ನು ಕೂಡ ಒದಗಿಸಿದ ಹೆಮ್ಮೆ ಹೊಂದಿದೆ. ಯುದ್ಧದ ನಂತರ ವಿಮಾನಯಾನ ಸಂಸ್ಥೆಗೆ ’’ಏರ್ ಇಂಡಿಯಾ’’ ಎಂಬ ಹೆಸರು ಕಾಯಂ ಆಗಿತ್ತು.
ಏರ್ ಕಾಪೊರ್‍ರೇಷನ್ಸ್ ಕಾಯಿದೆ ಅಡಿಯಲ್ಲಿ 1953ರಲ್ಲಿ ಟಾಟಾ ಸನ್ಸ್ ಕಂಪನಿಯಿಂದ ವಿಮಾನಯಾನ ಸಂಸ್ಥೆಯನ್ನು ವಶಕ್ಕೆ ಪಡೆದ ಸರ್ಕಾರವು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿತ್ತು.