ತಾನು ಗರ್ಭಧಾರಣೆ ಮಾಡಿದ್ದೇನೆ ಎಂಬ ವಿಷಯವೇ ಅರಿಯದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಎಂಟೇ ನಿಮಿಷಗಳಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಫೆನ್ಲೆಂಡ್‌ನ ಟುರ್ಕುನಲ್ಲಿ ಜರುಗಿದೆ.
ಟಿಲ್ಡಾ ಕಾಂಟಾಲಾ ಹೆಸರಿನ ಈ ಮಹಿಳೆ ಜೂನ್ 28ರಂದು ಸಣ್ಣದಾಗಿ ಹೊಟ್ಟೆ ನೋವಿನಿಂದ ಬೆಳಿಗ್ಗೆ ಎದ್ದಿದ್ದಾರೆ. ಆಹಾರದಲ್ಲಿ ವ್ಯತ್ಯಾಸವಾದ ಕಾರಣ ಹೊಟ್ಟೆಯಲ್ಲಿ ಏನೋ ಗಲಿಬಿಲಿ ಆಗಿದೆ ಎಂದುಕೊಂಡ ಟಿಲ್ಡಾಗೆ ಎರಡು ವರ್ಷಗಳ ಹಿಂದೆ ಮಗಳಿಗೆ ಜನ್ಮವಿತ್ತಾಗ ಆದಂಥ ಅನುಭವ ಆಗಿದೆಯೆಂದು ಅರಿವಿಗೆ ಬಂದಿದೆ.
ಎಲ್ಲಾ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದಸರಾ ಮುಗಿದ ನಂತ್ರ ಬಿಸಿಯೂಟ, 1 ರಿಂದ 5 ನೇ ತರಗತಿ ಆರಂಭ
“ಮೊದಲಿಗೆ ನಾರ್ಮಲ್ ಎನಿಸಿದ ಹೊಟ್ಟೆ ನೋವು, ಬಳಿಕ ಒಳಗಿಂದ ಏನನ್ನೋ ತಳ್ಳಬೇಕೆನಿಸುವಂತೆ ಆದಾಗ ನನಗೆ ಅರಿವಾಯಿತು ನಾನು ಪ್ರಸವದಲ್ಲಿದ್ದು, ಮಗುವಿಗೆ ಜನ್ಮ ನೀಡಲಿದ್ದೇನೆ ಎಂದು. ಆ ವೇಳೆ ನನಗೆ ಏನೂ ಗೊತ್ತಾಗುತ್ತಿರಲಿಲ್ಲ,” ಎಂದು 23 ವರ್ಷ ವಯಸ್ಸಿನ ತಾಯಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಚೆಕ್‌ಅಪ್‌ಗೆಂದು ಕರೆದುಕೊಂಡು ಹೋದ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಟಿಲ್ಡಾ.