alex Certify ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್

ಸತ್ತವರ ಹೆಸರಲ್ಲಿ ಜೀವ ವಿಮೆ ಮಾಡಿಸಿ ಬಳಿಕ ಅವರ ಹೆಸರಿನಲ್ಲಿ 1.81 ಕೋಟಿ ರೂಪಾಯಿ ಜೀವವಿಮೆಯನ್ನು ಸಂಗ್ರಹಿಸಿದ್ದ ಎಲ್​ಐಸಿ ಏಜೆಂಟ್ ​​ನ್ನು ಪೊಲೀಸರು ಬಂಧಿಸಿದ್ದಾರೆ. ಪುರಿ ಜಿಲ್ಲೆಯ ಕನಸ್​ ಪೊಲೀಸ್​ ಠಾಣಾ ವ್ಯಾಪ್ತಿಯ ಜಡಕಟಾ ಗ್ರಾಮದ ಕಬಿರಾಜ್​​ ಬೆಹೆರಾ ಬಂಧಿತ ಆರೋಪಿ.

ಈತ 2003ರಿಂದ ಎಲ್​ಐಸಿ ಏಜೆಂಟ್​ ಆಗಿ ಕಾರ್ಯನಿರ್ವಹಿಸುತ್ತಿದ್ದನು. 2013 ರಿಂದ 2019ರ ಅವಧಿಯಲ್ಲಿ ನಾಲ್ವರು ಸತ್ತ ವ್ಯಕ್ತಿಗಳ ಹೆಸರಲ್ಲಿ 23 ಪಾಲಿಸಿಗಳನ್ನು ಮಾಡಿಸಿದ್ದ. ಅಲ್ಲದೇ ದಾಖಲೆಗಳಲ್ಲಿ ಅವರು ಬದುಕಿದ್ದಾರೆ ಎಂದು ತೋರಿಸಿದ್ದ.‌

ಪಾಲಿಸಿ ರಿಜಿಸ್ಟರ್​ ಮಾಡಿದ ಮೂರರಿಂದ ಐದು ವರ್ಷಗಳ ಬಳಿಕ ವಿಮಾದಾರರ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರಗಳನ್ನು ನೀಡಿ ಹಣವನ್ನು ಪಡೆಯುತ್ತಿದ್ದ. ಕಬಿರಾಜ್​ ಕಳ್ಳಾಟದ ಬಗ್ಗೆ ಶಂಕೆ ಹೊಂದಿದ್ದ ಖುದ್ರಾ ಎಲ್​​ಐಸಿ ಶಾಖೆಯ ಹಿರಿಯ ಅಧಿಕಾರಿ ಈ ಸಂಬಂಧ ದೂರು ದಾಖಲಿಸಿದ್ದರು.

ಬಂಧಿತ ಕಬಿರಾಜ್​​ ವಿರುದ್ಧ ಸೆಕ್ಷನ್​ 420, 467,468,471 ಹಾಗೂ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾದಾರರು ಸಾವನ್ನಪ್ಪಿದ ಬಳಿಕ ಪಾಲಿಸಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅದರೆ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸತ್ತ ವ್ಯಕ್ತಿಗಳ ಹೆಸರಲ್ಲಿ ವಿಮೆ ಮಾಡಿಸಿ ಹಣವನ್ನು ದೋಚಲಾಗಿದೆ.

23 ನಕಲಿ ಪಾಲಿಸಿಗಳ ಮೂಲಕ 1.81 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಇಒಡಬ್ಲು ಎಸ್ಪಿ ಜೈ ನಾರಾಯಣ್​ ಪಂಕಜ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...