ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 21,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ ಏರಿಕೆಯಾಗಿದೆ.
ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 271 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 450127 ಕ್ಕೆ ಏರಿಕೆಯಾಗಿದೆ.
BIG NEWS: ಕ್ರಿಕೆಟ್ ನಲ್ಲಿ ಇನ್ಮುಂದೆ ‘ಬ್ಯಾಟ್ಸ್ ಮನ್’ ಬದಲು ‘ಬ್ಯಾಟರ್’ ಬಳಕೆ, ಟಿ20 ವಿಶ್ವಕಪ್‌ನಿಂದಲೇ ಆರಂಭ
ಇನ್ನು ದೇಶದಲ್ಲಿ 240,221 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಕಳೆದ 205 ದಿನಗಳಲ್ಲೇ ಅತಿ ಕಡಿಮೆ ಆಕ್ಟೀವ್ ಕೇಸ್ ಪತ್ತೆಯಾಗಿದೆ. 24 ಗಂಟೆಯಲ್ಲಿ 24963 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 33225221 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಐಟಿ ದಾಳಿ ಬೆನ್ನಲ್ಲೇ BSY ಆಪ್ತನಿಗೆ ಮತ್ತೊಂದು ಶಾಕ್, ಬಿಎಂಟಿಸಿ ಚಾಲಕ ಕೋಟ್ಯಧೀಶನಾಗಿದ್ದು ಹೇಗೆ ಗೊತ್ತಾ…? ಸತತ 24 ಗಂಟೆಗಳಿಂದ ಮುಂದುವರೆದ ಪರಿಶೀಲನೆ
ನಿನ್ನೆ ದೇಶದಲ್ಲಿ 13,85,706 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 50,17,753 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 93,17,17,191 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.