ವಿಜಯಪುರ: ವಿಜಯಪುರ ನಗರದ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರೈಲ್ವೆಸ್ಟೇಷನ್, ಶಿವಗಿರಿ ಬಡಾವಣೆ, ಅಲ್ಲಾಪುರ ಬಡಾವಣೆ, ತಾಂಡಾ, ಗೋಳಗುಮ್ಮಟ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ತಡರಾತ್ರಿ 12.20 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿ ಕಂಪಿಸಿದ್ದರಿಂದ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲವರು ತಮಗೆ ಆದ ಕಂಪನದ ಅನುಭವ ಹೇಳಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪದೇಪದೇ ಭೂಕಂಪದಿಂದಾಗಿ ಜನರಲ್ಲಿ ಆತಂಕ ಉಂಟಾಗಿದೆ.
ಇತ್ತೀಚೆಗಷ್ಟೇ ಎರಡು ಸಲ ವಿಜಯಪುರ ಜಿಲ್ಲೆಯ ಸಿಂದಗಿ ಸೇರಿದಂತೆ ಹಲವೆಡೆ ಭೂಕಂಪದ ಅನುಭವವಾಗಿತ್ತು. ಮಹಾರಾಷ್ಟ್ರದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿತ್ತು.