ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು ರೈಲ್ವೇ ಸಚಿವಾಲಯ ಇನ್ನು ಆರು ತಿಂಗಳವರೆಗೂ ವಿಸ್ತರಿಸಿದೆ.
ಮುಖದ ಹೊಳಪು ಹೆಚ್ಚಿಸಲು ಸಕ್ಕರೆ ಬಳಸಿ…
“ನಾನಾ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಆಯಾ ರಾಜ್ಯಗಳಲ್ಲಿ ಜಾರಿಯಲ್ಲಿರುವ ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ನು ಅರಿಯಬೇಕು,” ಎಂದು ಭಾರತೀಯ ರೈಲ್ವೇ ಟ್ವೀಟ್ ಮಾಡಿದೆ.
ಈ ರಾಶಿ ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನ
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕೋವಿಡ್-19ನ 22,431 ಹೊಸ ಪ್ರಕರಣಗಳು ಕಂಡುಬಂದಿದ್ದು, ಇದು ಬುಧವಾರ ಕಂಡುಬಂದಿದ್ದ 18,833 ಪ್ರಕರಣಗಳಿಗಿಂತ 19% ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಕೋವಿಡ್ ಸಂಬಂಧಿ 318 ಸಾವುಗಳು ಸಂಭವಿಸಿವೆ.
ಕೋವಿಡ್-19 ವ್ಯಾಪಕವಾದ ಹಿನ್ನೆಲೆಯಲ್ಲಿ ತನ್ನ ಪ್ರಯಾಣಿಕ ರೈಲುಗಳ ಸಂಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ರೈಲ್ವೇ, ಇದೀಗ ಸೋಂಕಿನ ಭೀತಿ ನಿಧಾನವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸೇವೆಯನ್ನು ಹಂತ ಹಂತವಾಗಿ ಮರು ಆರಂಭಿಸಲು ಮುಂದಾಗಿದೆ.