ಬೆಂಗಳೂರು: ರಾಜ್ಯದಲ್ಲಿ ಇಂದು 442 ಜನರಿಗೆ ಸೋಂಕು ತಗುಲಿದ್ದು, 7 ಜನ ಮೃತಪಟ್ಟಿದ್ದಾರೆ. 635 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 29, 79,773 ಏರಿಕೆಯಾಗಿದ್ದು, ಇದುವರೆಗೆ 29,30,264 ಜನ ಗುಣಮುಖರಾಗಿದ್ದಾರೆ. 37,861 ಜನ ಮೃತಪಟ್ಟಿದ್ದಾರೆ. 11,619 ಸಕ್ರಿಯ ಪ್ರಕರಣಗಳು ಇವೆ.
ರಾಜಧಾನಿ ಬೆಂಗಳೂರಿನಲ್ಲಿ 166 ಜನರಿಗೆ ಸೋಂಕು ತಗುಲಿದೆ. 173 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 7,563 ಸಕ್ರಿಯ ಪ್ರಕರಣಗಳು ಇವೆ.
ಜಿಲ್ಲಾವಾರು ಮಾಹಿತಿ:
ಬೆಂಗಳೂರು 156, ದಕ್ಷಿಣಕನ್ನಡ 43, ಹಾಸನ 35, ಮೈಸೂರು 31, ತುಮಕೂರು 36, ಬಾಗಲಕೋಟೆ 0, ಬೆಳಗಾವಿ 2, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 2, ದಾವಣಗೆರೆ 2, ಧಾರವಾಡ 2, ಗದಗ 0, ಹಾವೇರಿ 2, ಕಲಬುರ್ಗಿ 2, ಕೊಪ್ಪಳ 0, ರಾಯಚೂರು 1, ರಾಮನಗರ 2, ವಿಜಯಪುರ 0, ಯಾದಗಿರಿ 0 ಪ್ರಕರಣ ವರದಿಯಾಗಿವೆ.
ಮೃತಪಟ್ಟವರ ಸಂಖ್ಯೆ:
ಬೆಳಗಾವಿ 2, ಬೆಂಗಳೂರು ನಗರ 2, ದಕ್ಷಿಣಕನ್ನಡ 1, ಶಿವಮೊಗ್ಗ 1, ತುಮಕೂರು 1 ಸೇರಿ ರಾಜ್ಯದಲ್ಲಿ 7 ಜನ ಸೋಂಕಿತರು ಮೃತಪಟ್ಟಿದ್ದಾರೆ.