ಮೆದುಳು ನಿಷ್ಕ್ರಿಯಗೊಂಡಿದ್ದ 52 ವರ್ಷ ವ್ಯಕ್ತಿ ತನ್ನ ಕಿಡ್ನಿ ಹಾಗೂ ಯಕೃತ್ತು ದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದ್ದಾರೆ. ರೋಗಿಯು ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡಿದ್ದರು. ಆದರೆ ಇದಾದ ಬಳಿಕ ಬಲಭಾಗದಲ್ಲಿ ದೌರ್ಬಲ್ಯತೆ ಕಾಣಿಸಿಕೊಂಡಿದೆ. ಎಂಆರ್ಐ ಸ್ಕ್ಯಾನಿಂಗ್ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿದು ಬಂದಿದೆ.
ರೋಗಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕವೂ ರೋಗಿಯು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಇದಾದ ಬಳಿಕ ಕಿಡ್ನಿಗಳು ಹಾಗೂ ಯಕೃತ್ತನ್ನು ದೆಹಲಿಯ ಖಾಸಗಿ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಒಂದು ಕಿಡ್ನಿಯನ್ನು 60 ವರ್ಷದ ವೃದ್ಧೆಗೆ ಮತ್ತೊಂದು ಕಿಡ್ನಿಯಲ್ಲಿ 51 ವರ್ಷದ ಮಹಿಳೆಗೆ ಹಾಗೂ 54 ವರ್ಷದ ಪುರುಷನಿಗೆ ದೆಹಲಿ ಖಾಸಗಿ ಆಸ್ಪತ್ರೆಗಳಲ್ಲಿ ಯಕೃತ್ತನ್ನು ದಾನ ಮಾಡಲಾಗಿದೆ.
ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ್ರೆ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ
ಅಂಗಾಂಗ ದಾನದ ಪ್ರಾಮುಖ್ಯತೆಯನ್ನು ಅರಿತು ಮೂವರ ಜೀವ ಕಾಪಾಡಿದ ಮೃತ ವ್ಯಕ್ತಿ ಹಾಗೂ ಅವರ ಕುಟುಂಬಸ್ಥರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾವು ಅಂಗಾಂಗ ದಾನ ಮಾಡುವ ಮೂಲಕ ಸತ್ತ ಮೇಲೂ ಇನ್ನೊಬ್ಬರ ಜೀವ ಕಾಪಾಡಬಹುದು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ಮಾಡುವಿಕೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅನಿಲ್ ಮಂಧನಿ ಹೇಳಿದ್ದಾರೆ.