ಕೋವಿಡ್ ಸೋಂಕಿನ ಬಳಿಕ ಕೈ ಹಾಗೂ ಕಾಲುಗಳು ಕೆಂಪಾಗುವುದು ಹಾಗೂ ಉರಿಯೂತ ಸಂಭವಿಸುವುದು ಕೊರೊನಾದ ಅಡ್ಡಪರಿಣಾಮಗಳಲ್ಲಿ ಒಂದಾಗಿದ್ದಿರಬಹುದು ಎಂದು ಬ್ರಿಟಿಷ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ ಬಯಲಾಗಿದೆ.
ಚರ್ಮದ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದ ತಜ್ಞರ ಗುಂಪು ಇದು ಕೊರೊನಾ ವೈರಸ್ಗೆ ಮನುಷ್ಯನ ರೋಗನಿರೋಧಕ ಶಕ್ತಿ ನೀಡುವ ಪ್ರತಿಕ್ರಿಯೆ ಆಗಿರಬಹುದು ಎಂದು ಹೇಳಿದ್ದಾರೆ. ಸೋಂಕಿಗೆ ಒಳಪಟ್ಟ 1 ರಿಂದ ನಾಲ್ಕನೇ ವಾರದೊಳಗಾಗಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಇದು ಕೈ ಹಾಗೂ ಕಾಲ್ಬೆರಳು ಊದಿಕೊಳ್ಳುವುದು ಅಥವಾ ಕೆಂಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.
ಬಿಜೆಪಿಯಿಂದ ಅಚ್ಚರಿ ನಿರ್ಧಾರ, ಉದಾಸಿ ಕುಟುಂಬಕ್ಕೆ ಬಿಗ್ ಶಾಕ್ – ಬೈಎಲೆಕ್ಷನ್ ನಲ್ಲಿ ಹೊಸ ಪ್ರಯೋಗಕ್ಕಿಳಿದ ಹೈಕಮಾಂಡ್
ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ಲಕ್ಷಣವು ಸೋಂಕು ತಗುಲಿದ ಕೆಲವು ದಿನಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣದಲ್ಲಿ ಈ ಲಕ್ಷಣವು ಕೆಲವು ತಿಂಗಳುಗಳವರೆಗೆ ಮುಂದುವರಿಯಬಹುದು.
ಮನುಷ್ಯನ ದೇಹವು ಕೊರೊನಾ ಸೋಂಕಿಗೆ ಒಳಗಾದಾಗ ಈ ರೀತಿಯ ಲಕ್ಷಣ ಕಾಣಿಸಿಕೊಳ್ಳಲು ತಜ್ಞರು 2 ಕಾರಣಗಳನ್ನು ಪತ್ತೆ ಹೆಚ್ಚಿದ್ದಾರೆ. ಮೊದಲನೆಯದಾಗಿ ಆ್ಯಂಟಿ ವೈರಲ್ ಪ್ರೋಟಿನ್ ಇದನ್ನು ಟೈಪ್ 1 ಇಂಟರ್ ಫೆರಾನ್ ಎಂದು ಕರೆಯಲಾಗುತ್ತದೆ. ಇನ್ನೊಂದು ಪ್ರಕರಣದಲ್ಲಿ ಆ್ಯಂಟಿಬಾಡಿಗಳು ತಪ್ಪಾಗಿ ತಮ್ಮದೇ ದೇಹದ ಜೀವಕೋಶಗಳ ವಿರುದ್ಧ ಹೋರಾಡಲು ಆರಂಭಿಸುತ್ತವೆ. ಅಲ್ಲದೇ ವೈರಸ್ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.