alex Certify ಬದಲಾಗಲಿದೆಯಂತೆ ʼಜಿಮ್‌ ಕಾರ್ಬೆಟ್‌ʼ ನ್ಯಾಷನಲ್‌ ಪಾರ್ಕ್‌ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಲಿದೆಯಂತೆ ʼಜಿಮ್‌ ಕಾರ್ಬೆಟ್‌ʼ ನ್ಯಾಷನಲ್‌ ಪಾರ್ಕ್‌ ಹೆಸರು

ಉತ್ತರಾಖಂಡದ ಪ್ರಖ್ಯಾತ ’ಹುಲಿ ಸಂರಕ್ಷಿತ ಅರಣ್ಯಧಾಮ’ ಎಂದರೆ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌. ಇದು ವಿಶ್ವವಿಖ್ಯಾತವಾಗಿದೆ ಕೂಡ. ಹುಲಿಗಳ ಕುರಿತು ಅಧ್ಯಯನ ನಡೆಸಲು ಬಯಸುವವರಿಗೆ, ಪ್ರಾಣಿಪ್ರಿಯರಿಗೆ, ಅರಣ್ಯ ತಜ್ಞರಿಗೆ ಇದು ದೇವಸ್ಥಾನ ಇದ್ದಂತೆಯೇ ಸರಿ.

ಎಲ್ಲ ಜ್ಞಾನಗಳು ಅಡಗಿರುವ ಭಂಡಾರವಿದು. ಇದರ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ಹಾಗಂತ ಸುಳಿವು ಬಿಟ್ಟು ಕೊಟ್ಟವರು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ರಾಜ್ಯ ಖಾತೆ ಸಹಾಯಕ ಸಚಿವರಾದ ಅಶ್ವಿನಿ ಕುಮಾರ್‌ ಚೌಬೆ ಅವರು.

ಸುಲಭವಾಗಿ ಮಾಡಿ ಸವಿಯಿರಿ ʼತೆಂಗಿನಕಾಯಿʼ ರೈಸ್ ಬಾತ್

ಇತ್ತೀಚೆಗೆ ಪಾರ್ಕ್‌ನ ಮ್ಯೂಸಿಯಂಗೆ ಭೇಟಿ ನೀಡಿದ್ದ ಅವರು ಅತಿಥಿಗಳ ಅನಿಸಿಕೆ ಪುಸ್ತಕದಲ್ಲಿ ಹೆಸರು ಬದಲಾವಣೆಯ ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ ನಿರ್ದೇಶಕ ರಾಹುಲ್‌ ಕೂಡ ’ಹೂಂ’ ಎಂದು ತಲೆ ಅಲ್ಲಾಡಿಸಿದ್ದಾರಂತೆ.

ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇವಲ ಹಳೆಯ ಯೋಜನೆಗಳು, ಬಹುಕಾಲದ ಸ್ಮಾರಕಗಳು, ಖ್ಯಾತ ಕಟ್ಟಡ -ಸ್ಥಳಗಳ ಹೆಸರುಗಳ ಬದಲಾವಣೆಯಲ್ಲೇ ತೊಡಗಿಕೊಂಡಿದೆ ಎಂದು ಈಗಾಗಲೇ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಈ ನಡುವೆ ಕೇಂದ್ರ ಸಚಿವರ ನಡೆಯು ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಅಂದಹಾಗೆ, ಅರಣ್ಯ ಪ್ರೇಮಿ ಪ್ರಕಾಶ್‌ ಕಿಮೊತಿ ಅವರ ಪ್ರಕಾರ, 1936ರವರೆಗೆ ಈ ನ್ಯಾಷನಲ್‌ ಪಾರ್ಕ್‌ ಹೆಸರು ’ಹೇಲಿ ನ್ಯಾಷನಲ್‌ ಪಾರ್ಕ್‌’ ಎಂದು ಇತ್ತಂತೆ. ಬಳಿಕ ಬೇಟೆಗಾರ ಮತ್ತು ಖ್ಯಾತ ವನ್ಯಜೀವಿ ಸಂರಕ್ಷಕ ಎನಿಸಿದ ಜಿಮ್‌ ಕಾರ್ಬೆಟ್‌ ಅವರ ಹೆಸರನ್ನು ಪಾರ್ಕ್‌ಗೆ ಇರಿಸಲಾಯಿತಂತೆ. ಈ ನಡುವೆ ಸ್ಥಳೀಯರ ಪಾಲಿಗೆ ಈ ಪಾರ್ಕ್‌ ’ರಾಮಗಂಗಾ ಪಾರ್ಕ್‌’ ಆಗಿತ್ತಂತೆ. ಯಾಕೆಂದರೆ ಈ ಅಭಯಾರಣ್ಯದ ನಡುವೆ ಗಂಗಾ ನದಿ ಹರಿಯುತ್ತದೆ. ನೈನಿತಾಲ್‌ ಜಿಲ್ಲೆಯ ಬಹುತೇಕ ಪ್ರದೇಶವನ್ನು ವ್ಯಾಪಿಸಿರುವ ಈ ಪಾರ್ಕ್‌ನಲ್ಲಿ ಹುಲಿಗಳು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...