ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ.
ಗಾಯಾಳುವನ್ನು 32 ವರ್ಷದ ಆಶಿಷ್ ಸುರೇಶ್ ಪವಾರ್ ಎಂದು ಗುರುತಿಸಲಾಗಿದೆ, ಈ ಸಂಬಂಧ ಭೋಸಾರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ನಿಮ್ಮ ಸೊಸೆ ಕಂಡರೆ ಹೊಟ್ಟೆಕಿಚ್ಚು ಎಂದು ʼಬಿಗ್ ಬಿʼ ಗೆ ಹೇಳಿದ ಕೆಬಿಸಿ ಸ್ಪರ್ಧಿ
ಈ ಗಾಳಿಪಟವನ್ನು ಯಾರು ಹಾರಿಸಿದ್ದರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯ ಬೈಕ್ ಸವಾರ ಆಶಿಷ್ ಐಪಿಸಿ ಸೆಕ್ಷನ್ 337ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಾಳಿಪಟದ ದಾರಕ್ಕೆ ಗಾಜು ಲೇಪಿತವಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆಶಿಷ್ ಕುಮಾರ್ ಪುಣೆ – ಮುಂಬೈ ಹೆದ್ದಾರಿಯಲ್ಲಿರುವ ಬೊಪಾಡಿಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅವರ ಕುತ್ತಿಗೆಗೆ ದಾರ ಬಡಿದಿದೆ ಎನ್ನಲಾಗಿದೆ.