alex Certify ಆನ್ಲೈನ್ ಜೂಜಾಟ ಬಂದ್: ಬಳಕೆದಾರರಿಗೆ ಸಂದೇಶ ರವಾನೆ ಮಾಡಿದ ಕಂಪನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಜೂಜಾಟ ಬಂದ್: ಬಳಕೆದಾರರಿಗೆ ಸಂದೇಶ ರವಾನೆ ಮಾಡಿದ ಕಂಪನಿಗಳು

ಆನ್ಲೈನ್ ನಲ್ಲಿ ಜೂಜಾಟವಾಡ್ತಿದ್ದ ಕರ್ನಾಟಕದ ಜನರಿಗೆ ನಿರಾಶೆಯಾಗಿದೆ. ಕರ್ನಾಟಕ ಸರ್ಕಾರ, ಆನ್‌ಲೈನ್ ಜೂಜಾಟವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ. ಆನ್ಲೈನ್ ಜೂಜಾಟ ನಿಷೇಧ ಸಂಬಂಧ ಮಸೂದೆ ಅಂಗೀಕಾರವಾಗಿದೆ. ಹಣವಿಟ್ಟು ಆಡುವ ಆನ್ಲೈನ್ ಆಟವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘನೆಯಾದ್ರೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷದವರೆಗೆ ದಂಡ ವಿಧಿಸಲಾಗುವುದು.

ಸರ್ಕಾರದ ಈ ನಿರ್ಧಾರದ ನಂತ್ರ ಗೇಮಿಂಗ್ ಪ್ಲಾಟ್‌ಫಾರ್ಮ್ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ನಿಯಮಗಳು ಮತ್ತು ಷರತ್ತುಗಳನ್ನು ಅಪ್ಡೇಟ್ ಮಾಡಿದೆ. ಕರ್ನಾಟಕದಲ್ಲಿ ವಾಸಿಸುವ ಜನರಿಗೆ ಈ ಪ್ಲಾಟ್ಫಾರ್ಮ್ ನಲ್ಲಿ ಆಟವಾಡಲು ಯಾವುದೇ ಅವಕಾಶವಿಲ್ಲವೆಂದು ಎಂಪಿಎಲ್ ಹೇಳಿದೆ. ಎಂಪಿಎಲ್ ನಲ್ಲಿ 70ಕ್ಕೂ ಹೆಚ್ಚು ಆನ್ಲೈನ್ ಮೊಬೈಲ್ ಗೇಮ್ ಗಳಿವೆ.

BIG NEWS: ಮೃತ ವ್ಯಕ್ತಿ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡುವ ಮೊದಲು ಇದು ತಿಳಿದಿರಲಿ

ಕ್ರೀಡಾ ಅಪ್ಲಿಕೇಷನ್ Halaplay ಕೂಡ ಈ ಬಗ್ಗೆ ಮಾಹಿತಿ ರವಾನೆ ಮಾಡಿದೆ. ಕರ್ನಾಟಕದಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ ಅಪ್ಲಿಕೇಷನ್ ಮೂಲಕ ಹಣ ಪಾವತಿ ಆಟದಲ್ಲಿ ಆಡಲು ಅವಕಾಶವಿಲ್ಲವೆಂದು ಹೇಳಿದೆ.

ಆನ್‌ಲೈನ್ ರಮ್ಮಿ ಪೋರ್ಟಲ್‌ಗಳು Ace2Three ಮತ್ತು RummyCulture ಕೂಡ ರಾಜ್ಯದ ಆಟಗಾರರ ಮೇಲೆ ನಿಷೇಧ ಹೇರಿದೆ.

ಫ್ಯಾಂಟಸಿ ಕ್ರೀಡಾ ವೇದಿಕೆ BalleBaazi ಕೂಡ ಕರ್ನಾಟಕದ ಬಳಕೆದಾರರಿಗೆ ಇಮೇಲ್ ಕಳುಹಿಸಿದೆ. ರಾಜ್ಯದಲ್ಲಿ ರಿಯಲ್ ಮನಿ ಗೇಮಿಂಗ್ ನಿಷೇಧದಿಂದಾಗಿ, ಇನ್ಮುಂದೆ ಈ ಪ್ಲಾಟ್‌ಫಾರ್ಮ್ ಆಡಲು ಸಾಧ್ಯವಿಲ್ಲ ಎಂದಿದೆ. ಹಾಗೆ ನಿಮ್ಮ ಹಣ ನಮ್ಮ ಬಳಿ ಸುರಕ್ಷಿತವಾಗಿದ್ದು, ಅಕ್ಟೋಬರ್ 15ರೊಳಗೆ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುವುದಾಗಿ ಅದು ಹೇಳಿದೆ.

ʼರೋಟಿʼಯನ್ನು ಹೊಸ ಹೆಸರಿನಿಂದ ಪರಿಚಯಿಸಿದ ಕುಕ್ಕಿಂಗ್‌ ಚಾನೆಲ್‌ ಗೆ ನೆಟ್ಟಿಗರ ತರಾಟೆ

ಆದ್ರೆ ಡ್ರೀಮ್ 11,ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಡ್ರೀಮ್ 11 ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದ್ರೆ ಈಗ್ಲೂ ಕರ್ನಾಟಕದ ಜನರಿಗೆ ಗೇಮ್ ಪ್ರವೇಶ ಮಾಡಲು ಡ್ರೀಮ್ 11 ಅವಕಾಶ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...