alex Certify ಫೇಸ್​ ಬುಕ್​, ವಾಟ್ಸಾಪ್ ಸ್ಥಗಿತದ ಬಳಿಕ ‘ಟೆಲಿಗ್ರಾಂ’ಗಾದ ಲಾಭವೆಷ್ಟು ಗೊತ್ತಾ…..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್​ ಬುಕ್​, ವಾಟ್ಸಾಪ್ ಸ್ಥಗಿತದ ಬಳಿಕ ‘ಟೆಲಿಗ್ರಾಂ’ಗಾದ ಲಾಭವೆಷ್ಟು ಗೊತ್ತಾ…..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಫೇಸ್ ​ಬುಕ್​​ , ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯವಾದ ದಿನದಂದು ಟೆಲಿಗ್ರಾಂಗೆ 70 ಮಿಲಿಯನ್​ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ.

ಫೇಸ್ ​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಗಳಲ್ಲಿ 6 ಗಂಟೆಗಳ ಕಾಲ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಟೆಲಿಗ್ರಾಂಗೆ 70 ಮಿಲಿಯನ್​ ಹೊಸ ಬಳಕೆದಾರರ ಸೇರ್ಪಡೆಯಾಗಿದೆ ಎಂದು ಹೇಳಿದ್ರು.‌

ಷೇರು ಮಾರುಕಟ್ಟೆಯ ʼಮುಹೂರ್ತ ಟ್ರೇಡಿಂಗ್‌ʼ ಎಂದರೇನು…? ದೀಪಾವಳಿಯ ಈ ಶುಭ ವೇಳೆಯಲ್ಲಿ ನಡೆಯಲಿದೆ ವಹಿವಾಟು

ಟೆಲಿಗ್ರಾಂ ಪ್ರತಿನಿತ್ಯದ ಗ್ರೋಥ್​​ ದರವನ್ನು ಮೀರಿದೆ. ನಾವು ಒಂದೇ ದಿನದಲ್ಲಿ 70 ಮಿಲಿಯನ್​ ಇತರೆ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಸ್ವಾಗತಿಸಿದ್ದೇವೆ ಎಂದು ಡುರೋವ್​ ತಮ್ಮ ಟೆಲಿಗ್ರಾಂ ಚಾನೆಲ್​ನಲ್ಲಿ ಬರೆದುಕೊಂಡಿದ್ದಾರೆ.

ಬೇರೆ ಬೇರೆ ವೇದಿಕೆಗಳಲ್ಲಿ ದೋಷ ಕಂಡುಬಂದ ಬಳಿಕ 70 ಮಿಲಿಯನ್​ ಬಳಕೆದಾರರು ಟೆಲಿಗ್ರಾಂ ಕಡೆಗೆ ಮುಖ ಮಾಡಿದರು. ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದ ಬಳಿಕವೂ ನಮ್ಮ ತಂಡ ಯಾವುದೇ ದೋಷವಿಲ್ಲದೇ ಕಾರ್ಯ ನಿರ್ವಹಿಸಿದೆ. ಈ ಮೂಲಕ ಈ ಅಭೂತಪೂರ್ವ ಬೆಳವಣಿಗೆಯನ್ನು ಸ್ವಾಗತಿಸಿದೆ. ಪ್ರಪಂಚದ ವಿವಿಧ ಭಾಗಗಳಿಂದ ಮಿಲಿಯನ್​ಗಟ್ಟಲೇ ಬಳಕೆದಾರರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್​ ಆಗಿದ್ದಾರೆ ಎಂದು ಬರೆದಿದ್ದಾರೆ.

ರೈತರಿಗೆ ಬಂಪರ್: ಸಾರ್ವಕಾಲಿಕ ದಾಖಲೆ ಬರೆದ ಹತ್ತಿ ದರ, ಉತ್ತಮ ಬೆಲೆಯಿಂದ ಬೆಳೆಗಾರರಲ್ಲಿ ಹರ್ಷ

ಮಿಲಿಯನ್​ಗಟ್ಟಲೇ ಜನರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್​ ಆಗಿದ್ದರುಂದ ಅಮೆರಿಕದಲ್ಲಿ ಬಹುಶಃ ಟೆಲಿಗ್ರಾಂ ಸೇವೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಡುರೋವ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...