ಪ್ರತಿಯೊಬ್ಬರು ಸುರಕ್ಷಿತ ಹಾಗೂ ಹೆಚ್ಚು ಬೇಗ ಲಾಭ ನೀಡುವ ಹೂಡಿಕೆ ಯೋಜನೆ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇಳಿಯುತ್ತಿರುವ ಬಡ್ಡಿ ದರದಿಂದಾಗಿ, ಹೂಡಿಕೆದಾರರು, ಹೂಡಿಕೆಗೆ ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಣದ ಹೂಡಿಕೆ ಮಾಡುವ ಮೊದಲು ಕೆಲವೊಂದು ಸಂಗತಿಗಳನ್ನು ಸ್ಪಷ್ಟವಾಗಿ ತಿಳಿದಿರಬೇಕು.
ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಾಗ ಮೊದಲು, ನೀವು ಹೂಡಿಕೆ ಮಾಡುವ ಹಣ ಹಾಗೂ ಹೂಡಿಕೆ ಮಾಡುವ ಅವಧಿಯನ್ನು ಮೊದಲು ನಿಗದಿಪಡಿಸಿಕೊಳ್ಳಬೇಕು. ಅವಧಿ ಹಾಗೂ ಹೂಡಿಕೆ ಹಣ ನಿರ್ಧಾರವಾದ ಮೇಲೆ ನಿಮ್ಮ ಹೂಡಿಕೆಗೆ ಯಾವ ಯೋಜನೆ ಹೆಚ್ಚು ಲಾಭ ನೀಡಬಲ್ಲದು ಎಂಬುದನ್ನು ಲೆಕ್ಕ ಮಾಡಬೇಕಾಗುತ್ತದೆ. ವೇಗವಾಗಿ ನಿಮ್ಮ ಹಣ ದ್ವಿಗುಣಗೊಳ್ಳುವ ಯೋಜನೆಯನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದನ್ನು ಲೆಕ್ಕ ಹಾಕಲು ನೀವು `72ರ ನಿಯಮ’ವನ್ನು ಅನುಸರಿಸಬಹುದು.
72, ಸರಳ ನಿಯಮವಾಗಿದ್ದು, ಇದು ಹಣ ಎಷ್ಟು ವೇಗವಾಗಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ಹೇಳುತ್ತದೆ. 72ರ ಸಂಖ್ಯೆಯನ್ನು ಹೂಡಿಕೆ ಯೋಜನೆಯಲ್ಲಿ ನೀಡಲಾಗುವ ಬಡ್ಡಿ ದರದಲ್ಲಿ ಭಾಗಿಸಬೇಕಾಗುತ್ತದೆ.
ಮ್ಯೂಚುವಲ್ ಫಂಡ್ಗಳು ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಶೇಕಡಾ 100ರಷ್ಟು ರಿಟರ್ನ್ಸ್ ನೀಡುತ್ತವೆ. ಬ್ಯಾಂಕಿನ ಎಫ್ಡಿಯಲ್ಲಿ ನಿಮಗೆ ಶೇಕಡಾ 5.5ರಷ್ಟು ಬಡ್ಡಿ ಸಿಗುತ್ತದೆ. ನಿಮ್ಮ ಹಣ ದ್ವಿಗುಣಗೊಳ್ಳಲು ನಿಮಗೆ 13 ವರ್ಷಗಳು ಬೇಕಾಗುತ್ತವೆ. 72/5.5 = 13.09. ಪಿಪಿಎಫ್ ವರ್ಷಕ್ಕೆ ಶೇಕಡಾ 7.1ರ ಬಡ್ಡಿ ನೀಡುತ್ತಿದೆ. ಬಡ್ಡಿ ದರವು ಶೇಕಡಾ 7.1 ಅಂದ್ರೆ 72/7.1 = 10.14. ನಿಮ್ಮ ಹಣ ದ್ವಿಗುಣಗೊಳ್ಳಲು 10 ವರ್ಷ ಬೇಕಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇಕಡಾ 7.6ರಷ್ಟು ಬಡ್ಡಿ ಸಿಗ್ತಿದೆ. ನಿಮ್ಮ ಹಣ ದ್ವಿಗುಣಗೊಳ್ಳಲು 9.4 ವರ್ಷಗಳು ಬೇಕಾಗುತ್ತದೆ. ಇದನ್ನು ಲೆಕ್ಕ ಹಾಕಿದ ನಂತ್ರ ನೀವು ಹೂಡಿಕೆ ಮಾಡುವುದು ಉತ್ತಮ.