ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾದ ಬಡ್ತಿ ಮೀಸಲಾತಿಯನ್ನು ಸಮರ್ಥನೆ ಮಾಡಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ, ದಯವಿಟ್ಟು ತತ್ವಗಳ ಆಧಾರದ ಮೇಲೆ ವಾದ ಮಾಡಬೇಡಿ. ನಮಗೆ ದಾಖಲೆಗಳನ್ನು ತೋರಿಸಿ. ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಹಾಗೂ ನಿಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಹ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ರೈತರಿಗೆ ಬಂಪರ್: ಸಾರ್ವಕಾಲಿಕ ದಾಖಲೆ ಬರೆದ ಹತ್ತಿ ದರ, ಉತ್ತಮ ಬೆಲೆಯಿಂದ ಬೆಳೆಗಾರರಲ್ಲಿ ಹರ್ಷ
ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಸಾಮಾನ್ಯ ವರ್ಗದಿಂದ ಸಿ ಹಾಗೂ ಡಿ ಶ್ರೇಣಿಗೆ ಯಾವುದೇ ಹಕ್ಕುದಾರರು ಇರಲಿಲ್ಲ ಎಂದು ಹೇಳಿದರು.
1975ರವರೆಗೆ 3.5 ಪ್ರತಿಶತ ಎಸ್ಸಿ ಹಾಗೂ 0.62 ಪ್ರತಿಶತ ಎಸ್ಟಿ ವರ್ಗದವರು ಸರ್ಕಾರಿ ಹುದ್ದೆಯಲ್ಲಿ ಇದ್ದರು. 2008ರಲ್ಲಿ 17.5 ಪ್ರತಿಶತ ಎಸ್ಸಿ ಹಾಗೂ 6.8 ಪ್ರತಿಶತ ಎಸ್ಟಿ ವರ್ಗದವರು ಸರ್ಕಾರಿ ಹುದ್ದೆಯಲ್ಲಿದ್ದಾರೆ. ಅಂದರೆ ಈಗಲೂ ಕೂಡ ಅವರ ಸಂಖ್ಯೆ ಕಡಿಮೆ ಇರುವುದೇ ಈ ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವಂತಿದೆ ಎಂದು ವೇಣುಗೋಪಾಲ್ ಹೇಳಿದರು.
ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಕತ್ತಲಲ್ಲಿ ಮುಳುಗಲಿದೆ ಇಡೀ ಭಾರತ..? ಎಲೆಕ್ಟ್ರಿಸಿಟಿ ರೇಷನಿಂಗ್ ಜಾರಿ..? ಕಲ್ಲಿದ್ದಲು ಕೊರತೆ ತಂದ ಆತಂಕ
ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಬಿ.ಆರ್. ಭಾರ್ಗವಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರ ಸಂಖ್ಯೆಯು ಕ್ರಮವಾಗಿ ಶೇ.15 ಹಾಗೂ 7.5 ಪ್ರತಿಶತಕ್ಕೆ ತಲುಪಿದ ಬಳಿಕ ಈ ಮೀಸಲಾತಿಯನ್ನು ಮುಂದುವರಿಸದೇ ಇರುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ. ಈ ಪ್ರಕರಣ ಸಂಬಂಧ ವಿಚಾರಣೆಯು ಇಂದು ಕೂಡ ಮುಂದುವರಿಯುವ ಸಾಧ್ಯತೆ ಇದೆ.