ಚಿತ್ರದುರ್ಗ: ರಾಜ್ಯದ ಪ್ರಮುಖ ಹತ್ತಿ ಮಾರಾಟ ಕೇಂದ್ರವಾದ ಚಿತ್ರದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮಂಗಳವಾರ 1 ಕ್ವಿಂಟಲ್ ಹತ್ತಿ 16, 061 ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಹತ್ತಿಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಹತ್ತಿ ಮಾರಾಟಕ್ಕೆ ಬರುತ್ತಿದ್ದು, ಹತ್ತಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಕೂಡ ಸಂತಸಗೊಂಡಿದ್ದಾರೆ.
ಚಿತ್ರದುರ್ಗ ಎಪಿಎಂಸಿಯಲ್ಲಿ ಎರಡು ದಿನಕ್ಕೊಮ್ಮೆ ಹತ್ತಿ ಮಾರುಕಟ್ಟೆ ನಡೆಯಲಿದ್ದು, ಸುತ್ತಮುತ್ತಲಿನ ಜಿಲ್ಲೆಗಳ ಮತ್ತು ಆಂಧ್ರ ರೈತರು ಮಾರಾಟಕ್ಕೆ ಹತ್ತಿ ತರುತ್ತಾರೆ. ಕಳೆದೆರಡು ವರ್ಷಗಳಿಂದ ಹತ್ತಿ ಧಾರಣೆ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ ನಲ್ಲಿ 13 ಸಾವಿರ ರೂಪಾಯಿ ತಲುಪಿದ್ದ ಹತ್ತಿ ಬೆಲೆ ನಿನ್ನೆ 16 ಸಾವಿರ ರೂ. ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.