alex Certify ಕೃತಕ ಹೃದಯ ಹೊಂದಿದ್ದ ವ್ಯಕ್ತಿಗೆ ಮತ್ತೆ ಹೊಸ ಜೀವನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃತಕ ಹೃದಯ ಹೊಂದಿದ್ದ ವ್ಯಕ್ತಿಗೆ ಮತ್ತೆ ಹೊಸ ಜೀವನ

56 ವರ್ಷದ ಇರಾಕ್‌ ಪ್ರಜೆಯ ಕೃತಕ ಹೃದಯವನ್ನು ಬಹಳ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನೊಯ್ಡಾದ ಫೋರ್ಟಿಸ್‌ ಆಸ್ಪತ್ರೆಯ ತಜ್ಞವೈದ್ಯ ಡಾ. ಅಜಯ್‌ ಕೌಲ್‌ ಅವರು ತೆಗೆದುಹಾಕಿದ್ದಾರೆ.

ಹಾಗಿದ್ದರೆ, ಇರಾಕ್‌ ಪ್ರಜೆಯ ನಿಜವಾದ ಅಥವಾ ಪ್ರಾಕೃತಿಕ ಹೃದಯ ಏನಾಯ್ತು ಎಂಬುದು ನಿಮ್ಮ ಪ್ರಶ್ನೆಯೇ? ಅದು ಕೆಟ್ಟುಹೋಗಿತ್ತು, ಆದರೆ ಸದ್ಯ ಪೂರ್ಣವಾಗಿ ಚೇತರಿಸಿಕೊಂಡಿದೆ ! ಹೌದು, ಹೃದಯ ವೈಫಲ್ಯದ ಸಮಸ್ಯೆಯಿಂದಾಗಿ ಕೆಲವು ವರ್ಷಗಳ ಮುನ್ನ ಇರಾಕ್‌ ಪ್ರಜೆಯು ಫೋರ್ಟಿಸ್‌ಗೆ ದಾಖಲಾಗಿದ್ದರು. ಆ ವೇಳೆ ಅವರ ಹೃದಯವು ಬಹಳ ದುರ್ಬಲವಾಗಿತ್ತು. ಹಾಗಾಗಿ ಎಲ್‌ವಿಎಡಿ ಅಥವಾ ಕೃತಕ ಹೃದಯವನ್ನು ವೈದ್ಯರು ಅಳವಡಿಸಿ ಅವರ ಜೀವ ಕಾಪಾಡಿದ್ದರು.

ಆರೋಗ್ಯಕ್ಕೆ ಒಳ್ಳೆಯದು ʼವೀಳ್ಯದೆಲೆʼ

ಆರು ತಿಂಗಳಿಗೊಮ್ಮೆ ತಪಾಸಣೆಗೆ ಬರುತ್ತಿದ್ದ ಇರಾಕ್‌ ಪ್ರಜೆಯು ಬಹಳ ಚೇತರಿಕೆಯೊಂದಿಗೆ ಉತ್ತಮ ಜೀವನಶೈಲಿ ರೂಢಿಸಿಕೊಂಡಿದ್ದರು. ಕಳೆದ ಕೆಲ ತಿಂಗಳ ಮುನ್ನ ಅವರು ತಪಾಸಣೆಗೆ ಬಂದಾಗ ಅವರ ಹೃದಯದ ಸಮೀಪ ಸಣ್ಣ ಸೋಂಕು ಉಂಟಾಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಅದೇ ವೇಳೆ ಕೆಲವು ಪ್ರಯೋಗಾಲಯದ ಪರೀಕ್ಷಾ ವರದಿಗಳಲ್ಲಿ ನಿಜವಾದ ಹೃದಯ ಪೂರ್ಣವಾಗಿ ಚೇತರಿಸಿಕೊಂಡಿರುವ ಸುಳಿವು ಕಂಡಿತ್ತು. ಕೂಡಲೇ ಕೂಲಂಕಷ ತಪಾಸಣೆ ನಡೆಸಿದ ವೈದ್ಯರಿಗೆ ತಿಳಿದಿದ್ದು, ಇರಾಕ್‌ ಪ್ರಜೆಗೆ ಕೃತಕ ಹೃದಯದ ಅಗತ್ಯವಿಲ್ಲ ಎನ್ನುವ ಸತ್ಯ.

ಚೆನ್ನಾಗಿರುತ್ತೆ ‘ನೇಚರ್’ ಜೊತೆ ಬೆಳೆದ ಮಕ್ಕಳ ‘ಫ್ಯೂಚರ್’

ಅವರು ಬಹಳ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಕೃತಕ ಹೃದಯ (ಪಂಪ್‌) ತೆಗೆದುಹಾಕಿ, ಇರಾಕ್‌ ಪ್ರಜೆಗೆ ಮರುಜೀವದಾನ ನೀಡಿದ್ದಾರೆ. ಇಂಥ ಅಪರೂಪದ ಮತ್ತು ಸಾಹಸಮಯ ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಸಲಾಗಿದೆ ಎಂದು ಆಸ್ಪತ್ರೆ ಹೇಳಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...