ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.
ಬೀಡಿ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯು ಅಂಗಡಿ ಮಾಲೀಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
‘ಆರ್ಯನ್ ಖಾನ್ ತಪ್ಪಾದ ಸಮಯದಲ್ಲಿ, ತಪ್ಪಾದ ಜಾಗದಲ್ಲಿದ್ದ’ ಶಾರೂಕ್ ಪುತ್ರನ ಪರ ದನಿಯೆತ್ತಿದ ಸುಸೇನ್ ಖಾನ್
ಹತ್ಯೆಯ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ಹಿಡಿದ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
30 ವರ್ಷದ ವಿಭಾ ಆಪೆ ಎಂಬಾಕೆ ತನ್ನ ಪತಿಯ ಜೊತೆ ಸೇರಿ ಸಣ್ಣ ಅಂಗಡಿಯನ್ನು ಇಟ್ಟಿದ್ದಳು. ಈ ಅಂಗಡಿಯಲ್ಲಿ ದಿನಸಿ ಸಾಮಗ್ರಿ ಹಾಗೂ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆರೋಪಿ ದೀಪಕ್ ಎಂಬಾತ ರಾತ್ರಿ 10:30ರ ಸುಮಾರಿಗೆ ಅಂಗಡಿ ತಲುಪಿದ್ದಾನೆ. ಮದ್ಯ ಸೇವನೆ ಮಾಡಿದ್ದ ದೀಪಕ್ ಮಹಿಳೆಯ ಬಳಿ ಬೀಡಿ ನೀಡುವಂತೆ ಕೇಳಿದ್ದಾನೆ. ಆದರೆ ಬೀಡಿ ನೀಡಲು ವಿಭಾ ನಿರಾಕರಿಸಿದ್ದಳು.
ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ
ಇದರಿಂದ ಕೋಪಗೊಂಡ ಆರೋಪಿಯು ವಿಭಾ ಜೊತೆ ವಾಗ್ವಾದಕ್ಕೆ ಇಳಿದ್ದಾನೆ. ಅಲ್ಲದೇ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ದೀಪಕ್ ಕೈನಿಂದ ತಪ್ಪಿಸಿಕೊಳ್ಳಲು ವಿಭಾ ಯತ್ನಿಸುತ್ತಿದ್ದಂತೆಯೇ ಚೀಲದಿಂದ ಚಾಕು ತೆಗೆದ ಆರೋಪಿಯು ವಿಭಾಳ ಕುತ್ತಿಗೆಯನ್ನು ಇರಿದಿದ್ದಾನೆ. ಇದಾದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ಆರೋಪಿ ಓಡಿ ಹೋಗುತ್ತಿರೋದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಚೆನ್ನಾಗಿ ಬಾರಿಸಿದ್ದಾರೆ. ಈ ಸಮಯಕ್ಕೆ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದಾರೆ ಹಾಗೂ ಆರೋಪಿಯನ್ನು ಗ್ರಾಮಸ್ಥರಿಂದ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.