ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಸೇವೆಯು ಜಾಗತಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಬಳಕೆದಾರರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕೆಲವು ಬಳಕೆದಾರರು ಮಾತ್ರ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಫೇಸ್‌ಬುಕ್ ವೆಬ್‌ಸೈಟ್ ಈ ಬಗ್ಗೆ ಸಂದೇಶ ರವಾನೆ ಮಾಡಿದೆ. ಕ್ಷಮಿಸಿ, ಏನೋ ತಪ್ಪಾಗಿದೆ. ನಾವು ಇದ್ರ ಮೇಲೆ ಕೆಲಸ ಮಾಡ್ತಿದ್ದೇವೆ. ಆದಷ್ಟು ಬೇಗ ಸರಿ ಮಾಡ್ತೇವೆಂದು ಫೇಸ್ಬುಕ್ ನಲ್ಲಿ ಹೇಳಲಾಗಿದೆ.
ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಮತ್ತು ಸಂವಹನ ವೇದಿಕೆ ವಾಟ್ಸ್ ಆಪ್ ಭಾರತೀಯ ಕಾಲಮಾನ ರಾತ್ರಿ 9 ರ ಸುಮಾರಿಗೆ ಕೆಲಸ ಮಾಡುತ್ತಿಲ್ಲ ಎಂದು ಬಳಕೆದಾರರು ಟ್ವಿಟರ್ ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.
Downdetector.com ನಲ್ಲಿ ಅನೇಕ ದೂರುಗಳು ಬಂದಿವೆ. ಪೋರ್ಟಲ್ ಪ್ರಕಾರ, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ಗೆ ಸಂಬಂಧಿಸಿದ 20,000 ಕ್ಕೂ ಹೆಚ್ಚು ದೂರುಗಳು ವರದಿಯಾಗಿವೆ.
ಸಾಮಾಜಿಕ ಮಾಧ್ಯಮ ದೈತ್ಯ ತ್ವರಿತ ಸಂದೇಶ ವೇದಿಕೆ ವಾಟ್ಸಾಪ್ ನ 14,000 ಕ್ಕೂ ಹೆಚ್ಚು ಬಳಕೆದಾರರಿಗೆ ತೊಂದರೆಯಾಗಿದೆ. ಸುಮಾರು 3,000 ಮೆಸೆಂಜರ್ ಕೆಲಸ ಮಾಡ್ತಿಲ್ಲ. ಫೇಸ್‌ಬುಕ್ ಭಾರತದಲ್ಲಿ 410 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ವಾಟ್ಸಾಪ್ ಮೆಸೆಂಜರ್ ದೇಶವನ್ನು 530 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.