ದಾವಣಗೆರೆ: ನನಗೆ ರಾಜಕೀಯದ ಸಹವಾಸವೇ ಬೇಡ…ಇರುವಷ್ಟು ದಿನ ಹಿಂದುತ್ವ ಹೋರಾಟ ಮಾಡುತ್ತೇನೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಮುತಾಲಿಕ್ ಬದಲಿಗೆ ದಿ.ಸಚಿವ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಲ್ಲದೇ ಮಂಗಳಾ ಅಂಗಡಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಪ್ರಮೋದ್ ಮುತಾಲಿಕ್ ಕನಸು ಹಾಗೇಯೆ ಉಳಿದಿದೆ.
ಕೆಲವೇ ನಿಮಿಷಗಳಲ್ಲಿ ಹೃದಯಾಘಾತವನ್ನು ಪತ್ತೆ ಮಾಡುತ್ತೆ ಈ ವಿಶೇಷ ಸಾಧನ…..!
ಇದೀಗ ಉಪಚುನಾವಣೆಗಳು ಘೋಷಣೆಯಾಗಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ಮುತಾಲಿಕ್, ಸದ್ಯಕ್ಕೆ ನನಗೆ ರಾಜಕೀಯ ಸಹವಾಸ ಬೇಡ. ಉಪಚುನಾವಣೆಯಲೂ ಸ್ಪರ್ಧಸಲ್ಲ. ಭ್ರಷ್ಟ ರಾಜಕಾರಣಕ್ಕೆ ನಾನು ಫಿಟ್ ಆಗಿಲ್ಲ. ಇರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಾಮಾಣಿಕರು, ಹೋರಾಟಗಾರರು ರಾಜಕೀಯಕ್ಕೆ ಬೇಡವಾಗಿದ್ದಾರೆ. ಜಾತಿವಾದಿಗಳು, ಗೂಂಡಾಗಳು, ಲೂಟಿಕೋರರು ಬೇಕಾಗಿದ್ದಾರೆ. ಹಾಗಾಗಿ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ. ಯಾವ ರಾಜಕೀಯವೂ ನನಗೆ ಬೇಡ ಎಂದಿದ್ದಾರೆ.