ಬೆಂಗಳೂರು: ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬೆಂಗಳೂರು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ.
ವಾರದಲ್ಲಿ 3 ಕಡೆ ದಾಳಿ ನಡೆಸಿದ್ದ ಎನ್.ಸಿ.ಬಿ. ಅಧಿಕಾರಿಗಳು ಇದೀಗ ಮತ್ತೊಂದು ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದೆ. ಬಂಧಿತರಿಂದ ಬರೋಬ್ಬರಿ 1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬ್ರಹ್ಮ ರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹಂ ಎಂದು ಕೇರಳ ಆಯುರ್ವೇದ ಔಷಧಿ ಹೆಸರಗಳನ್ನು ಬಳಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ ಬಂಧಿತರು ಪ್ರಸಾದದ ನೆಪದಲ್ಲಿ ಕೊರಿಯರ್ ನಲ್ಲಿ ಡ್ರಗ್ಸ್ ಸಾಗಾಣೆ ಮಾಡುತ್ತಿದ್ದರು.
ಬೆಂಗಳೂರಿನಿಂದ ಬಹ್ರೇನ್, ಚೆನ್ನೈ ಹಾಗೂ ಕೇರಳದ ಎರ್ನಾಕುಲಂ ಗೆ ಡ್ರಗ್ಸ್ ಸಾಗಿಸುತ್ತಿದ್ದರು. ಆರೋಪಿಗಳಿಂದ 3.5 ಕೆಜಿ ಹ್ಯಾಶಿಷ್ ಜಫ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.