30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಹೃದಯಾಘಾತವನ್ನು ಪತ್ತೆ ಮಾಡಬಲ್ಲ ಸೆನ್ಸಾರ್ನ್ನು ಸಂಶೋಧಕರ ತಂಡವೊಂದು ಅಭಿವೃದ್ಧಿಪಡಿಸಿದೆ.
ಅಧ್ಯಯನವು ನೀಡಿರುವ ಮಾಹಿತಿಯ ಪ್ರಕಾರ ಮೈಕ್ರೋಆರ್ಎನ್ಎ ಅಥವಾ ಎಂಐ ಆರ್ಎನ್ಎಗಳನ್ನು ಗುರಿಯಾಗಿಸಿಕೊಂಡು ಈ ಸೆನ್ಸಾರ್ ಹೃದಾಯಾಘಾತವನ್ನು ಪತ್ತೆ ಮಾಡಲಿದೆ.
ಈ ಸೆನ್ಸಾರ್ಗೆ ಪ್ರೋಟಿನ್ ಆಧಾರಿತ ಬಯೋಮಾರ್ಕರ್ಗೆ ಹೋಲಿಕೆ ಮಾಡಿದರೆ ಎಂಆರ್ಎನ್ಎ ಬಳಕೆ ಮಾಡುವುದು ಹೆಚ್ಚು ಪ್ರಯೋಜನವನ್ನು ನೀಡುತ್ತಿದೆ ಎಂದು ನಾಟ್ರೆಡಾಮ್ ವಿಶ್ವವಿದ್ಯಾಲಯದ ಹುಸಹ್ ಚಿಯಾ ಚಾಂಗ್ ಹೇಳಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಲ್ಯಾಬ್ ಆನ್ ಎಚಿಪ್ನಲ್ಲಿ ಪ್ರಕಟಿಸಲಾಗಿದ್ದು ತಜ್ಞ ವೈದ್ಯರಿಗೆ ಹೃದಯಾಘಾತವನ್ನು ಪತ್ತೆ ಹಚ್ಚಲು ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಎಕೋಕಾರ್ಡಿಯೋಗ್ರಾಮ್ ಪ್ರಾಥಮಿಕ ಪರೀಕ್ಷೆಯಲ್ಲಿ ಅತ್ಯಂತ ವೇಗವಾಗಿ ಹೃದಯ ಸಂಬಂಧಿ ಕಾಯಿಲೆಯನ್ನು ಪತ್ತೆ ಮಾಡಿದೆ. ಆದರೆ ನಿಜಕ್ಕೂ ಹೃದಯಾಘಾತವಾಗಿದೆ ಎಂಬುದು ದೃಢೀಕರಿಸಲು ರಕ್ತದ ಮಾದರಿಗಳ ಪರೀಕ್ಷೆಯ ಅಗತ್ಯವಿರುತ್ತದೆ. ಹೀಗಾಗಿ ಮುಂದಿನ ಪರೀಕ್ಷೆಗಳು ಪೂರ್ಣಗೊಳ್ಳಲು 8 ಗಂಟೆಗಳ ಕಾಲಾವಕಾಶ ಬೇಕು.