alex Certify ಗಡಿ ನಿರ್ಬಂಧವಿದ್ದರೂ ವಧುವಿನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದು ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿ ನಿರ್ಬಂಧವಿದ್ದರೂ ವಧುವಿನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದು ಹೇಗೆ ಗೊತ್ತಾ….?

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಕಷ್ಟು ನಿಯಮಗಳಿವೆ. ಇದೆಲ್ಲದರ ನಡುವೆ ಇಲ್ಲೊಂದು ಜೋಡಿಯು ಗಡಿ ನಿರ್ಬಂಧದ ಹೊರತಾಗಿಯೂ ವಿಭಿನ್ನ ರೀತಿಯಲ್ಲಿ ಮದುವೆಯಾಗಿದ್ದಾರೆ.

ಹೌದು, ಮೂಲತಃ ಕೆನಾಡ ಮೂಲದವಳಾಗಿರುವ ವಧು ಕರೆನ್ ಮಹೋನಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ವಾಸವಿದ್ದಾಳೆ.

ನವರಾತ್ರಿ ಶುಭ ಸಂದರ್ಭದಲ್ಲಿ ಮಾಡಿ ಈ ಕೆಲಸ

ಇವಳು ತನ್ನ ಬಾಲ್ಯದ ಗೆಳೆಯ ಅಮೆರಿಕಾದ ಬ್ರಿಯಾನ್ ರೇ ಜೊತೆ ಮದುವೆಯಾಗಲು ಸಿದ್ಧಳಾಗಿದ್ದಳು. ಆದರೆ, ಕೊರೋನಾ ಕಾರಣದಿಂದ ಯುಎಸ್-ಕೆನಡಾದ ಗಡಿ ಭಾಗವನ್ನು ಮುಚ್ಚಲಾಗಿರುವುದರಿಂದ, ತನ್ನ ಕುಟುಂಬ ಹೇಗೆ ಮದುವೆಯಲ್ಲಿ ಪಾಲ್ಗೊಳ್ಳುತ್ತಾರೋ ಎಂಬ ಚಿಂತೆ ಅವಳದಾಗಿತ್ತು.

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ಮದುವೆಯ ದಿನಾಂಕವು ಸಮೀಪಿಸುತ್ತಿತ್ತು, ಅಷ್ಟರಲ್ಲಾಗಲೇ ವಧು ತಲೆಗೊಂದು ಐಡಿಯಾ ಹೊಳೆದಿದೆ. ಯುಎಸ್-ಕೆನಡಾ ಗಡಿ ಬಳಿಯೇ ಇವರು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ವಧುವಿನ ಪೋಷಕರು ಕೂಡ ಮದುವೆಯಲ್ಲಿ ಖುಷಿಯಿಂದಲೇ ಭಾಗವಹಿಸಿದ್ದಾರೆ. ಗಡಿಯಾಚೆ ಪೋಷಕರು ನಿಂತಿದ್ದರೆ, ಈಚೆಗೆ ವಧು-ವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸದ್ಯ, ಎರಡೂ ಕುಟುಂಬಗಳು ಖುಷಿಯಿಂದಲೇ ಮದುವೆಯ ಸಂಭ್ರವನ್ನಾಚಾರಿಸಿದೆ. ವಧುವಿನ 96 ವರ್ಷದ ಅಜ್ಜಿ-ತಾತ ಈ ವಿವಾಹದಲ್ಲಿ ಪಾಲ್ಗೊಂಡು, ಕೆನಡಾ ಗಡಿಯಿಂದಲೇ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...