ಫ್ಯೂಷನ್ ಮ್ಯೂಸಿಕ್ ಮಾದರಿಯಲ್ಲಿ ಫ್ಯೂಷನ್ ಆಹಾರ ಖಾದ್ಯಗಳ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ’ಲಾಲಿಪಾಪ್ ಇಡ್ಲಿ’ಯ ಫೋಟೊ ಭಾರಿ ವೈರಲ್ ಆಗಿತ್ತು.
ದಕ್ಷಿಣ ಭಾರತದ ಜನಪ್ರಿಯ ಆಹಾರ ಖಾದ್ಯ ಹಾಗೂ ಯಾವುದೇ ಹೊತ್ತಿನಲ್ಲಿ, ಯಾವುದೇ ಹವಾಮಾನದಲ್ಲೂ ಕೂಡ ಸೇವಿಸಲು ಉತ್ತಮವಾದ ಆಹಾರ ’ಇಡ್ಲಿ’ಯನ್ನು ಲಾಲಿಪಾಪ್ ನಂತೆ ಕಡ್ಡಿಗೆ ಸಿಗಿಸಿಕೊಂಡು ಸಾಂಬಾರ್ ಮತ್ತು ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವ ಹೊಸ ಶೈಲಿಯ ಫೋಟೊ ವೈರಲ್ ಆಗಿತ್ತು.
ಇಂದೋರ್ ಹೋಟೆಲ್ ಗಳಲ್ಲಿ ಇನ್ಮುಂದೆ ಸಿಗೋದು ಕೇವಲ ‘ಅರ್ಧ ಗ್ಲಾಸ್ ನೀರು’ ಮಾತ್ರ…!
ಅದನ್ನು ಮೀರಿಸುವ ತವಕದಲ್ಲಿ ಲೇಟೆಸ್ಟ್ ಎನ್ನುವಂತೆ ಸಾಮಾಜಿಕ ಜಾಲತಾಣಕ್ಕೆ ಭೇಟಿ ಕೊಟ್ಟಿರುವುದು ’ ಸ್ಟ್ರಾಬೆರ್ರಿ ಮತ್ತು ಚಾಕೋಲೆಟ್ ಸಮೋಸಾ’ ! ಹೌದು, ಟ್ವಿಟರ್‌ನಲ್ಲಿ ಹರ್ಷ ಗೊಯೆಂಕಾ ಅವರು ಇದರ ಒಂದು ವಿಡಿಯೊವನ್ನು ಹಂಚಿಕೊಂಡು, ಸಾಕಪ್ಪ ಇಂಥ ಹೊಸ ಖಾದ್ಯಗಳ ಸಹವಾಸ ಎಂದಿದ್ದಾರೆ.
18 ಸೆಕೆಂಡ್‌ಗಳ ಈ ವಿಡಿಯೊ ತುಣುಕಿನಲ್ಲಿ ಪಿಂಕ್ ಹಾಗೂ ಚಾಕೋಲೇಟ್ ಬಣ್ಣದ ಸಮೋಸಾ, ಅದರೊಳಗೆ ಭರ್ತಿ ಜಾಮ್ ತುಂಬಿರುವುದನ್ನು ಕಾಣಬಹುದಾಗಿದೆ.
ಭರ್ಜರಿ ಗುಡ್ ನ್ಯೂಸ್: ದೇಶದಲ್ಲೇ ಮೊದಲ ಬಾರಿಗೆ ವಿದ್ಯುತ್ ಗ್ರಾಹಕರಿಗೆ ಕಂಪನಿಗಳಿಂದ ಹಣ ವಾಪಸ್
ಈ ವಿಡಿಯೊವನ್ನು ಆಹಾರ ಖಾದ್ಯಗಳ ಬ್ಲಾಗರ್‌ವೊಬ್ಬರು ಹಂಚಿಕೊಂಡಿದ್ದಾರೆ. ಇದಲ್ಲದೇ, ಸ್ಟ್ರಾಬೆರ್ರಿ ಸಮೋಸಾ ಪ್ರದರ್ಶನ ಬಳಿಕ ತಂದೂರಿ ಪನೀರ್ ಸಮೋಸಾ ಸೇವನೆಯ ವಿಡಿಯೊ ತುಣುಕನ್ನು ಕೂಡ ಕಾಣಬಹುದಾಗಿದೆ.
ಇದ್ಯಾವುದೂ ಕೂಡ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಆಹಾರ ಖಾದ್ಯಗಳ ಪ್ರಯೋಗ ಎಂದಿಗೂ ಒಳ್ಳೆಯದೇ, ಆದರೆ ತೀರ ಹೇಸಿಗೆ ಅನಿಸುವಷ್ಟರ ಮಟ್ಟಿಗೆ ಬೇಡ.
ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್…!
ಜನರ ಮನಸ್ಸು, ನಾಲಿಗೆಗೆ ಹತ್ತಿರವಾಗಿರುವ ಖಾದ್ಯಗಳನ್ನು ಅದೇ ಸ್ವಾದದಲ್ಲಿ ಉಳಿಸಿಕೊಳ್ಳುವ ಸಾಮಾನ್ಯ ಜ್ಞಾನ ಆಹಾರ ತಯಾರಕರಿಗೆ ಇದ್ದರೆ ಉತ್ತಮ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಖಾರವಾದ ಜನಾಭಿಪ್ರಾಯ ವ್ಯಕ್ತವಾಗಿದೆ.
https://twitter.com/hvgoenka/status/1443939620517920771?ref_src=twsrc%5Etfw%7Ctwcamp%5Etweetembed%7Ctwterm%5E1443939620517920771%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fviral%2Fafter-idli-on-stick-video-of-strawberry-and-chocolate-samosas-goes-viral-netizens-hate-it-2399428.html