alex Certify BIG NEWS: ಶಿಕ್ಷಕರಿಂದ ಕಠಿಣ ನಿರ್ಧಾರ, ನಿಷ್ಠಾ ತರಬೇತಿ ಬಹಿಷ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿಕ್ಷಕರಿಂದ ಕಠಿಣ ನಿರ್ಧಾರ, ನಿಷ್ಠಾ ತರಬೇತಿ ಬಹಿಷ್ಕಾರ

ಬೆಂಗಳೂರು: ನಿಷ್ಠಾ ತರಬೇತಿ ಬಹಿಷ್ಕರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರಿಗೆ ಕರೆ ನೀಡಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ನಿಷ್ಠಾ -3.0 ತರಬೇತಿಯನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ.

6 ರಿಂದ 8ನೇ ತರಗತಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ 2017ರಲ್ಲಿ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ.

2016 -17 ಕ್ಕಿಂತ ಮೊದಲು ಒಂದರಿಂದ ಏಳನೇ ತರಗತಿವರೆಗೆ ಪಾಠ ಮಾಡುತ್ತಿದ್ದ ಎಲ್ಲಾ ಶಿಕ್ಷಕರನ್ನು ಒಂದರಿಂದ ಐದನೇ ತರಗತಿವರೆಗೆ ಬೋಧನೆ ಮಾಡಲು ಮಾತ್ರ ನಿಯೋಜಿಸಲಾಗಿದೆ.

ಒಂದರಿಂದ ಐದನೇ ತರಗತಿಗೆ ಪಾಠ ಮಾಡುತ್ತಿರುವ ಸೇವಾನಿರತ ಶಿಕ್ಷಕರಲ್ಲಿ ಸುಮಾರು 80 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಈ ಶಿಕ್ಷಕರನ್ನು ಪದವೀಧರ ಶಿಕ್ಷಕರು ಎಂದು ಪರಿಗಣಿಸಿ ಆರರಿಂದ ಎಂಟನೇ ತರಗತಿಗೆ ಪಾಠ ಮಾಡಲು ನಿಯಮಾವಳಿಗೆ ತಿದ್ದುಪಡಿ ತರಬೇಕೆಂದು ಅನೇಕ ಬಾರಿ ಒತ್ತಾಯ ಮಾಡಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿಷ್ಠಾ ತರಬೇತಿಯನ್ನು ಬಹಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...