ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 664 ಜನರಿಗೆ ಸೋಂಕು ತಗುಲಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. 711 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 29,77,889 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,819 ಸೋಂಕಿತರು ಸಾವನ್ನಪ್ಪಿದ್ದು, 29,27,740 ಜನ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ. 12,301 ಸಕ್ರಿಯ ಪ್ರಕರಣಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 196 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 254 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7600 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ 196, ದಕ್ಷಿಣಕನ್ನಡ 76, ಹಾಸನ 45, ಕೊಡಗು 52, ಮೈಸೂರು 101, ಉಡುಪಿ 33, ಉತ್ತರಕನ್ನಡ 43 ಹೊಸ ಪ್ರಕರಣ ವರದಿಯಾಗಿವೆ.
ಮೃತಪಟ್ಟವರ ಸಂಖ್ಯೆ:
ಬೆಂಗಳೂರು ನಗರ 3, ದಕ್ಷಿಣಕನ್ನಡ 1, ಹಾಸನ 1, ಕೊಡಗು 1, ಮೈಸೂರು 1, ತುಮಕೂರು 1 ಸೇರಿ 8 ಜನ ಸೋಂಕಿತರ ಮೃತಪಟ್ಟಿದ್ದಾರೆ.