ಜನಪ್ರಿಯ ಯೂಟ್ಯೂಬರ್ ರೆಗಿನಾಲ್ಡ್ ಗಿಲಾಮೆ ನ್ಯೂಯಾರ್ಕ್ ಬೀದಿಯೊಂದರಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ತಮ್ಮೊಂದಿಗೆ ಬಂದು ಹಾಡು ಹೇಳಲು ಕೋರಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಗೌರಂಗ್ ರಖೋಲಿಯಾ ಹೆಸರಿನ ವ್ಯಕ್ತಿಯನ್ನು ತಡೆದು ನಿಲ್ಲಿಸಿದಾಗ “ನನಗೆ ಇಂಗ್ಲಿಷ್ನ ಯಾವುದೇ ಹಾಡು ಗೊತ್ತಿಲ್ಲ,” ಎಂದು ಹೇಳಿ ಹೊರಡಲು ಅಣಿಯಾಗಿದ್ದರು.
ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಅರೆಸ್ಟ್, ಹಡಗಿನಲ್ಲಿ ನಡಿತಿದ್ದ ರೇವ್ ಪಾರ್ಟಿ ಮೇಲೆ ದಾಳಿ ವೇಳೆ ಡ್ರಗ್ ವಶಕ್ಕೆ
ಯಾವ ಭಾಷೆಯಲ್ಲಿ ತಾವು ಮಾತನಾಡುತ್ತೀರಿ ಎಂದು ರೆಗಿನಾಲ್ಡ್ ಕೇಳಿದಾಗ, ಖುಷಿಯಾದ ಗೌರಂಗ್ ತನಗೆ ಹಿಂದಿ ಹಾಡುಗಳು ಬರುತ್ತವೆ ಎಂದು ಹೇಳಿದರು.
’ಪರ್ಫೆಕ್ಟ್’ ಎಂದ ರೆಗಿನಾಲ್ಡ್, ಹಾಡಿನ ಲಯವನ್ನು ಕ್ಯಾಚ್ ಮಾಡಲು ತನಗೆ ಕೆಲವೇ ನಿಮಿಷಗಳು ಸಾಕು ಎಂದಿದ್ದಾರೆ.
ತನಗೆ ಕಿಶೋರ್ ಕುಮಾರ್ ಬಹಳ ಇಷ್ಟವೆಂದ ಗೌರಂಗ್, ’ದಿಲ್ಬರ್ ಮೇರೆ’ ಹಾಡನ್ನು ಹಾಡಲು ಇಷ್ಟ ಪಡುವುದಾಗಿ ಹೇಳಿಕೊಂಡಿದ್ದಾರೆ.
‘ಲವ್ ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್
1982ರ ಚಿತ್ರ ’ಸತ್ತೇ ಪೆ ಸತ್ತಾ’ದ ’ದಿಲ್ಬರ್ ಮೇರೆ’ ಹಾಡಿಗೆ ರೆಗಿನಾಲ್ಡ್ ತಮ್ಮ ಗಿಟಾರ್ನಲ್ಲಿ ಟ್ಯೂನ್ ಬಾರಿಸುವ ಮೂಲಕ ದಾರಿಹೋಕರನ್ನು ರಂಜಿಸಿದ್ದಾರೆ.