ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲಿದ್ದು, ರೈತರ ಖಾತೆಗಳಿಗೆ ತಲಾ 2000 ರೂ.ಗಳನ್ನು ಜಮಾ ಮಾಡಲಾಗುವುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ ಈ ಯೋಜನೆಯಲ್ಲಿ ರೈತರಿಗೆ ವಾರ್ಷಿಕ 6,000 ರೂಪಾಯಿಗಳ ನೆರವಿನ ಧನ ನೀಡಲಾಗುವುದು. ಈ ಸಹಾಯಧನವನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುವುದು.
ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ
ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ಸ್ವೀಕರಿಸಲು ಸೆಪ್ಟೆಂಬರ್ 30, 2021ರ ಒಳಗೆ ರೈತರು ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಹೀಗೆ ನೋಂದಣಿ ಮಾಡಿಕೊಂಡ ರೈತರಿಗೆ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ದುಡ್ಡು ಸಿಗಲಿದೆ.
ಉತ್ತಮ ಸ್ಥಿತಿಯ ‘ನಿವೃತ್ತಿ’ ಜೀವನ ಬಯಸುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಸಲಹೆ
ಇದುವರೆಗೂ, 12.14 ಕೋಟಿ ರೈತರು ಈ ಯೋಜನೆ ಆರಂಭಗೊಂಡಾಗಿನಿಂದಲೂ ಪ್ರಯೋಜನ ಪಡೆದಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಯೋಜನೆಯ ಎರಡನೇ ಹಾಗೂ ಒಟ್ಟಾರೆ 10ನೇ ಕಂತು ಇದಾಗಲಿದ್ದು, ದೇಶಾದ್ಯಂತ 10.27 ಕೋಟಿ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು.