alex Certify BIG NEWS: ನಾಗಚೈತನ್ಯ-ಸಮಂತಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ನೀಡುವ ನಿರ್ಧಾರ ಘೋಷಿಸಿದ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಗಚೈತನ್ಯ-ಸಮಂತಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ನೀಡುವ ನಿರ್ಧಾರ ಘೋಷಿಸಿದ ಸಮಂತಾ

ಹೈದರಾಬಾದ್: ಟಾಲಿವುಡ್ ನ ಜನಪ್ರಿಯ ಜೋಡಿ ನಟ ನಾಗಚೈತನ್ಯ- ನಟಿ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯುತ್ತಿರುವುದಾಗಿ ಇಬ್ಬರೂ ಘೋಷಿಸಿದ್ದಾರೆ. ಈ ಮೂಲಕ ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯ ಅಂತ್ಯವಾಗಿದೆ.

ಹಲವು ದಿನಗಳಿಂದಲೂ ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಅಲ್ಲದೇ ಮತ್ತೆ ಅವರಿಬ್ಬರೂ ಒಂದಾಗಲಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಿಹಿಸುದ್ದಿ ಹೊರಬರಲಿದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಬೇಸರದ ಸುದ್ದಿ ಹೊರಬಿದ್ದಿದೆ. ತಾವಿಬ್ಬರೂ ದಾಂಪತ್ಯ ಜೀವನದಿಂದ ದೂರ ಸರಿಯುತ್ತಿರುವುದಾಗಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸ್ಪಷ್ಟಪಡಿಸಿದ್ದಾರೆ.

3 ತಿಂಗಳೊಳಗಿನ ಮಗು ದತ್ತು ಪಡೆದವರಿಗೆ ಮಾತ್ರ ಮಾತೃತ್ವ ರಜೆ; ನಿಯಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ʼಸುಪ್ರೀಂʼ ನೋಟಿಸ್

ಈ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಸಮಂತಾ, ಸಾಕಷ್ಟು ಆಲೋಚನೆಗಳನ್ನು ಮಾಡಿ ನಾವಿಬ್ಬರೂ ಬೇರೆಯಾಗಲು ನಿರ್ಧರಿಸಿದ್ದೇವೆ. ಆದರೆ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯ ಮುಂದುವರೆಯಲಿದೆ. ದಶಕಗಳ ಕಾಲ ಸ್ನೇಹಿತರಾಗಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಆದರೆ ನಾವಿಬ್ಬರೂ ದಾಂಪತ್ಯ ಜೀವನದಿಂದ ಬೇರೆಯಾಗಲು ಬಯಸಿದ್ದೇವೆ. ನಮ್ಮ ಮುಂದಿನ ದಾರಿ, ಭವಿಷ್ಯವನ್ನು ನಾವು ನೋಡಿಕೊಳ್ಳುವ ಕಾರಣದಿಂದ ಇನ್ಮುಂದೆ ನಾವು ಪತಿ – ಪತ್ನಿಯರಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ 10 ವರ್ಷಗಳ ಕಾಲ ಪ್ರೀತಿಸಿ 2017 ಅ.6ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರೂ ದೂರವಾಗುತ್ತಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...