alex Certify BREAKING: ಲೋಕ ಜನಶಕ್ತಿ ಪಕ್ಷದ ʼಚಿಹ್ನೆʼ ಬಳಕೆಗೆ ಚುನಾವಣಾ ಆಯೋಗದಿಂದ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಲೋಕ ಜನಶಕ್ತಿ ಪಕ್ಷದ ʼಚಿಹ್ನೆʼ ಬಳಕೆಗೆ ಚುನಾವಣಾ ಆಯೋಗದಿಂದ ನಿರ್ಬಂಧ

ಲೋಕ ಜನಶಕ್ತಿ ಪಕ್ಷ(ಎಲ್​ಜೆಪಿ)ದ ಚಿಹ್ನೆಗಾಗಿ ಚಿರಾಗ್​ ಪಾಸ್ವಾನ್​ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಸ್​ ನಡುವೆ ನಡೆಯುತ್ತಿದ್ದ ಜಟಾಪಟಿಗೆ ಚುನಾವಣಾ ಆಯೋಗ ಪೂರ್ಣವಿರಾಮ ನೀಡಿದೆ.

ಎಲ್​ಜೆಪಿ ಪಕ್ಷದ ಚಿಹ್ನೆಯಾದ ಬಂಗಲೆಯ ಬಳಕೆಗೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಚುನಾವಣೆಯಲ್ಲಿ ಈ ಚಿಹ್ನೆಯನ್ನು ಬಳಕೆ ಮಾಡಲು ಎರಡೂ ಬಣದವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.

ಅಂತಿಮ ನಿರ್ಧಾರವನ್ನು ಘೋಷಣೆ ಮಾಡುವ ಕೊನೆಯ ಹಂತದವರೆಗೂ ಎರಡೂ ಗುಂಪುಗಳಿಗೆ ಹೊಸ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಚುನಾವಣಾ ಆಯೋಗ ಸಲಹೆ ನೀಡಿತ್ತು. ಆದರೆ ಇದಕ್ಕೆ ಎರಡೂ ಬಣದವರು ಮಣಿಯದ ಕಾರಣ ಮುಂಬರುವ ಬಿಹಾರದ ಕುಶೇಶ್ವರ ಹಾಗೂ ತಾರಾಪುರ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬಹುದು. ಆದರೆ ಲೋಕ ಜನಶಕ್ತಿ ಪಕ್ಷ ಎಂಬ ಹೆಸರನ್ನು ಬಳಕೆ ಮಾಡುವಂತಿಲ್ಲ ಎಂದು ಖಡಕ್​​ ಸೂಚನೆ ನೀಡಿದೆ.

ಶುಕ್ರವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಚಿರಾಗ್​ ಪಾಸ್ವಾನ್ ಪಕ್ಷದ ಗುರುತನ್ನು ತಮ್ಮ ಬಣಕ್ಕೆ ನೀಡಬೇಕು ಎಂದು ಕೇಳಿಕೊಂಡಿದ್ದರು. ಎಲ್​ಜೆಪಿಯ ಒಂದು ಬಣಕ್ಕೆ ಚಿರಾಗ್​ ಪಾಸ್ವಾನ್​ ನಾಯಕರಾಗಿದ್ದರೆ ಇನ್ನೊಂದು ಬಣಕ್ಕೆ ಪಾಸ್ವಾನ್ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್​​ ನಾಯಕರಾಗಿದ್ದಾರೆ.

ಈ ವರ್ಷದ ಜೂನ್ ತಿಂಗಳಲ್ಲಿ ಐವರು ಸಂಸದರು ಪಾಸ್ವಾನ್​ ಬಣದಿಂದ ಪರಸ್​ ಬಣಕ್ಕೆ ಶಿಫ್ಟ್​ ಆದ ಬೆನ್ನಲ್ಲೇ ಈ ಹಗ್ಗಜಗ್ಗಾಟ ಶುರುವಾಗಿತ್ತು. ಇದಾದ ಬಳಿಕ ಪಶುಪತಿ ಪಾಟ್ನಾದಲ್ಲಿ ಎಲ್​ಜೆಪಿಯ ಅಧ್ಯಕ್ಷ ತಾವೇ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...