ಸಂಬಂಧಗಳ ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಗಳಿದ್ದಲ್ಲಿ ಕೋರ್ಟ್ಗಳು ರಕ್ತ ಪರೀಕ್ಷೆ, ಡಿಎನ್ಎ ಟೆಸ್ಟ್ಗಳಿಗೆ ಆದೇಶಿಸಕೂಡದು. ಒಂದು ವೇಳೆ ಪ್ರಕರಣದ ಅಂತ್ಯಕ್ಕೆ ನಿರ್ಣಾಯಕವಾಗಿದ್ದು, ಆರೋಪಿ ಅಥವಾ ಅರ್ಜಿದಾರರು ರಕ್ತದ ಮಾದರಿ ಪರೀಕ್ಷೆಗೆ ಒಪ್ಪಿದರೆ ಮಾತ್ರವೇ ಕೋರ್ಟ್ಗಳು ರಕ್ತ ಪರೀಕ್ಷೆಗೆ ಆದೇಶಿಸಬೇಕು.
ಯಾಕೆಂದರೆ ರಕ್ತಪರೀಕ್ಷೆಯಲ್ಲಿ ಸೂಕ್ಷ್ಮವಾದ ಖಾಸಗಿ ಆರೋಗ್ಯ ಸಂಬಂಧಿ ಮಾಹಿತಿಗಳು ಇರುತ್ತವೆ. ಡಿಎನ್ಎ ಎನ್ನುವುದು ಆ ವ್ಯಕ್ತಿಯ ಖಾಸಗಿ ವಂಶವಾಹಿ ಆಗಿದೆ. ಹಾಗಾಗಿ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ನಡೆಸಲಾಗುವ ಡಿಎನ್ಎ ಪರೀಕ್ಷೆಯು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಖಾಸಗಿ ಹಕ್ಕಿನ ಉಲ್ಲಂಘನೆ ಎನಿಸಲಿದೆ ಎಂದು ಸೂಚನೆಯನ್ನು ಅಧೀನ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ನೀಡಿದೆ.
ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಕೇಂದ್ರ ಸರ್ಕಾರದ ಪ್ರಕರಣ ವಿಚಾರಣೆ ಸಂಬಂಧ ಸುಪ್ರೀಂಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ಮೋದಿಯನ್ನು ಹೀಗೆ ಬಿಟ್ರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತೆ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಪೂರ್ವಜರ ಸ್ವತ್ತಿನ ಮಾಲೀಕತ್ವವನ್ನು ಸಾಬೀತುಪಡಿಸಲು ನಡೆಯುತ್ತಿರುವ ಪ್ರಕರಣದ ವಿಚಾರಣೆ ಇದು. ತ್ರಿಲೋಕ್ ಚಂದ್ ಮತ್ತು ಸೋನಾದೇವಿ ಅವರ ಸಂತಾನ ಎಂದು ಸಾಬೀತುಪಡಿಸುವುದು ಅರ್ಜಿದಾರ ಅಶೋಕ್ ಕುಮಾರ್ ಅವರಿಗೆ ಅಗತ್ಯವಾಗಿದೆ. ಆದರೆ ಅವರು ಡಿಎನ್ಎ ಪರೀಕ್ಷೆಗೆ ನಿರಾಕರಿಸಿದ್ದಾರೆ. ಸಾಕಷ್ಟು ಪೂರಕ ದಾಖಲೆಗಳನ್ನು ಕೋರ್ಟ್ಗೆ ಒಪ್ಪಿಸಿದ್ದೇನೆ ಎಂದು ವಾದಿಸಿದ್ದಾರೆ.
ಪ್ರತಿವಾದಿಗಳು ಡಿಎನ್ಎ ಪರೀಕ್ಷೆಯೊಂದೇ ಜೈವಿಕ ಬೆಸುಗೆಯ ಕೊಂಡಿಯಾಗಿದ್ದು, ಅದು ನಡೆದರೆ ಮಾತ್ರವೇ ಅಶೋಕ್ ಅವರ ರಕ್ತ ಸಂಬಂಧ ಖಾತ್ರಿಯಾಗಲಿದೆ ಎಂದು ಕೋರ್ಟ್ಗೆ ಒತ್ತಾಯಿಸಿದ್ದಾರೆ.