ದಲಿತ ನಾಯಕ ಹಾಗೂ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಆಯ್ಕೆ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇವಾನಿ, ಕಾಂಗ್ರೆಸ್ ಪಕ್ಷ ತಮಗೆ ಯಾವ ರೀತಿಯಲ್ಲಿ ಸರಿಯಾದ ವೇದಿಕೆಯಾಗಿದೆ ಎಂಬುದಕ್ಕೆ ವಿವರಣೆ ನೀಡಿದ್ದಾರೆ.
ಕಳೆದ ಆರೇಳು ವರ್ಷಗಳಲ್ಲಿ ದೇಶದ ಯಾವುದೇ ಕಡೆಯಲ್ಲಿ ಏನನ್ನೇ ನೋಡಿದರೂ ಪ್ರಜಾಪ್ರಭುತ್ವದ ವಿನಾಶಗಳೇ ಕಂಡುಬಂದಿದೆ. ಭಾರತದ ಸಂವಿಧಾನದ ಮೇಲೆಯೇ ದಾಳಿ ನಡೆಯುವಂತಹ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಸಂವಿಧಾನವನ್ನೇ ತಿದ್ದುಪಡಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುವ ಹುನ್ನಾರಕ್ಕೆ ಮುಂದಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ರಕ್ಷಿಸಬೇಕಾದ್ದದ್ದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಇದಕ್ಕಾಗಿ ನನಗೊಂದು ವೇದಿಕೆ ಬೇಕು. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ಗಿಂತ ಉತ್ತಮವಾದ ವೇದಿಕೆ ಬೇರೊಂದು ಇದೆ ಎಂದು ನನಗೆ ಅನಿಸಲಿಲ್ಲ ಎಂದು ಮೇವಾನಿ ಹೇಳಿದ್ರು.
ಕಾಂಗ್ರೆಸ್ನ ಸಿದ್ಧಾಂತವು ಭಾರತದ ಸಂವಿಧಾನದ ಕಲ್ಪನೆಗಳಿಗೆ ಹೋಲಿಕೆಯನ್ನು ಹೊಂದಿದೆ. ರಾಹುಲ್ ಗಾಂಧಿ ಯಾವುದೇ ಸಂದರ್ಭದಲ್ಲಿಯೂ ಆರ್ಎಸ್ಎಸ್ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದ ವ್ಯಕ್ತಿ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.