alex Certify 500ಕ್ಕೂ ಹೆಚ್ಚು ರನ್ ಗಳಿಸಿದ ಈ ಆಟಗಾರನಿಗೆ ಇದು ಕೊನೆ ಐಪಿಎಲ್ ಆಗಲಿದೆಯಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500ಕ್ಕೂ ಹೆಚ್ಚು ರನ್ ಗಳಿಸಿದ ಈ ಆಟಗಾರನಿಗೆ ಇದು ಕೊನೆ ಐಪಿಎಲ್ ಆಗಲಿದೆಯಾ….?

ಐಪಿಎಲ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈ ಋತುವಿನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಯೆಲ್ಲೋ ಆರ್ಮಿಯ ಬಹುತೇಕ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. ಇತಿಹಾಸದಲ್ಲಿ ಅಬ್ಬರಿಸಿದ್ದ ಆಟಗಾರರೊಬ್ಬರ ಬ್ಯಾಟ್ ಮಾತ್ರ ಇತ್ತೀಚಿಗೆ ಮೌನವಾಗಿದೆ.

ಯಸ್. ನಾವು ಹೇಳ್ತಿರೋದು ಬೇರೆ ಯಾರೂ ಅಲ್ಲ. ಒಂದು ಕಾಲದಲ್ಲಿ ಸ್ಟಾರ್ ಕ್ರಿಕೆಟರ್ ಆಗಿದ್ದ ಸುರೇಶ್ ರೈನಾ. ಸದ್ಯ ಸುರೇಶ್ ರೈನಾ ಅಬ್ಬರ ಕಾಣ್ತಿಲ್ಲ. ಐಪಿಎಲ್ 2021 ರಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ. ಈ ಋತುವಿನಲ್ಲಿ ಸುರೇಶ್ ರೈನಾ 11 ಪಂದ್ಯಗಳನ್ನು ಆಡಿದ್ದಾರೆ. 19.62 ಸರಾಸರಿಯಲ್ಲಿ 157 ರನ್ ಗಳಿಸಿದ್ದಾರೆ.

ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಉಳಿದ ದುಡ್ಡಲ್ಲಿ ಮಾಡಿದ್ದೇನು ಗೊತ್ತಾ….?

ಸುರೇಶ್ ರೈನಾ ಕೊನೆಯ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 3 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ ನಂತ್ರ ಸುರೇಶ್ ರೈನಾ ವಿಕೆಟ್ ಒಪ್ಪಿಸಿದ್ರು.

ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದೂ ಕರೆಯುತ್ತಾರೆ. ಈ ಪಂದ್ಯಾವಳಿಯ ಇತಿಹಾಸದಲ್ಲಿ ರೈನಾ ಇದುವರೆಗೆ 204 ಪಂದ್ಯಗಳನ್ನು ಆಡಿದ್ದಾರೆ. 32.69 ಸರಾಸರಿಯಲ್ಲಿ 5,525 ರನ್ ಗಳಿಸಿದ್ದಾರೆ. 136.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಂದು ಶತಕ ಮತ್ತು 39 ಅರ್ಧ ಶತಕ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಗ್ರಾಮೀಣ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಸಮೀಪದಲ್ಲೇ ಸರ್ಕಾರಿ ಸೇವೆ ಒದಗಿಸಲು ಗ್ರಾಪಂಗಳಲ್ಲಿ ನಾಗರಿಕ ಸೇವಾ ಕೇಂದ್ರ ಸ್ಥಾಪನೆ

ಐಪಿಎಲ್ 2022 ರ ಮೊದಲು, ಆಟಗಾರರ ಮೆಗಾ ಹರಾಜು ನಡೆಯಲಿದೆ. ಉಳಿದ ಪಂದ್ಯಗಳಲ್ಲಿ ಸುರೇಶ್ ರೈನಾ ತನ್ನ ಸಾಮರ್ಥ್ಯ ತೋರಿಸಲು ವಿಫಲವಾದರೆ, ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಋತುವಿನಲ್ಲಿ ಅವರನ್ನು ಉಳಿಸಿಕೊಳ್ಳುವುದು ಅನುಮಾನ. ನಾಯಕ ಎಂ.ಎಸ್.ಧೋನಿ ಜೊತೆ ಇನ್ನೂ ಅನೇಕ ಆಟಗಾರರು ಸಿಎಸ್ಕೆನಲ್ಲಿದ್ದಾರೆ.

ಒಂದು ವೇಳೆ ಇದೇ ರೀತಿ ಆಟವನ್ನು ಸುರೇಶ್ ರೈನಾ ಮುಂದುವರಿಸಿದ್ರೆ ಇದು ಸುರೇಶ್ ರೈನಾಗೆ ಕೊನೆಯ ಐಪಿಎಲ್ ಸೀಸನ್ ಆಗಬಹುದು. ಒಂದು ವೇಳೆ ಬೇರೆ ತಂಡ ಅವರನ್ನು ಖರೀದಿ ಮಾಡಿದ್ರೂ,ಆಡುವ 11 ಆಟಗಾರರಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...