ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ಗ್ರಾಹಕರಿಗೆ ಅಡುಗೆ ಅನಿಲದ ಸ್ಮಾರ್ಟ್ ಸಿಲಿಂಡರ್ಗಳನ್ನು ಬಿಡುಗಡೆ ಮಾಡಿದೆ. ಈ ಸಿಲಿಂಡರ್ಗಳಲ್ಲಿ ಎಷ್ಟು ಅನಿಲ ಬಳಕೆಯಾಗಿದೆ ಹಾಗೂ ಉಳಿದಿದೆ ಎಂದು ಆಗಾಗ ತಿಳಿಯುತ್ತಿರಬಹುದಾಗಿದೆ.
ಮೂರು ಸ್ತರಗಳಲ್ಲಿ ನಿರ್ಮಾಣವಾದ ಇಂಡೇನ್ ಅಡುಗೆ ಅನಿಲದ ಹೊಸ ಸಿಲಿಂಡರ್ಗಳು ಅಧಿಕ ಸಾಂದ್ರತೆಯ ಪಾಲಿಥೈಲಿನ್ (ಎಚ್ಡಿಪಿಇ) ಒಳ ಪದರ ಹಾಗೂ ಹೊರ ಪದರದಲ್ಲಿ ಪಾಲಿಮರ್ನಿಂದ ಆವರಿಸಲ್ಪಟ್ಟ ಫೈಬರ್ ಗ್ಲಾಸ್ ಹಾಗೂ ಎಚ್ಡಿಪಿಇ ಹೊರಕವಚದಿಂದ ಮಾಡಲ್ಪಟ್ಟಿದೆ.
ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ
ಈ ಸಿಲಿಂಡರ್ಗಳು ಹಗುರವಾಗಿದ್ದು, ಉಕ್ಕಿನ ಸಿಲಿಂಡರ್ಗಳ ಅರ್ಧದಷ್ಟು ತೂಕ ಇರಲಿವೆ. ಅರೆ ಪಾರದರ್ಶಕವಾದ ಈ ಸಿಲಿಂಡರ್ಗಳನ್ನು ಬೆಳಕಿಗೆ ಹಿಡಿದರೆ ಎಲ್ಪಿಜಿ ಮಟ್ಟ ಎಷ್ಟಿದೆ ಎಂದು ಅರಿಯಬಹುದಾಗಿದೆ. ಇದರಿಂದ ರೀಫಿಲ್ ಯಾವಾಗ ಮಾಡಬೇಕಾಗಬಹುದು ಎಂದು ಅರಿಯಲು ಗ್ರಾಹಕರಿಗೆ ತಿಳಿಯಲು ಸಹಾಯವಾಗಲಿದೆ.
ತುಕ್ಕು ಹಿಡಿಯದ ಈ ಸಿಲಿಂಡರ್ಗಳು ಸವೆಯುವುದಿಲ್ಲ. ಇದರಿಂದಾಗಿ ನೆಲದ ಮೇಲೆ ಕಲೆಗಳು ಸೃಷ್ಟಿಯಾಗುವ ಸಾಧ್ಯತೆಗಳು ಇರುವುದಿಲ್ಲ.
ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ದೇಶದ 28 ನಗರಗಳಲ್ಲಿ ಈ ಸಿಲಿಂಡರ್ಗಳು ಸಿಗಲಿವೆ.