ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಒಳ್ಳೆಯ ಸುದ್ದಿಯೊಂದರಲ್ಲಿ, ಚೀನಾದ ಕಾರು ಉತ್ಪಾದಕ ವುಲಿಂಗ್ ಹಾಂಗ್ಗುವಾಂಗ್ ಜಗತ್ತಿನ ಅತ್ಯಂತ ಅಗ್ಗದ ಇವಿ ಕಾರನ್ನು ಬಿಡುಗಡೆ ಮಾಡಲಿದೆ.
ನ್ಯಾನೋ ಹೆಸರಿನ ಈ ಕಾರನ್ನು ಟಾಟಾ ಮೋಟಾರ್ಸ್ ಉತ್ಪಾದಿಸಿರುವ ಅತ್ಯಂತ ಅಗ್ಗದ ಕಾರಿನಿಂದ ಸ್ಪೂರ್ತಿ ಪಡೆದು ನಿರ್ಮಿಸಿದೆ ವುಲಿಂಗ್ ಹಾಂಗ್ಗುವಾಂಗ್.
ಈ ಕಾರು ಅತ್ಯಂತ ಸಣ್ಣದಾದ ಹಾಗೂ ಅಗ್ಗದ ಇವಿ ಕಾರಾಗಿರಲಿದ್ದು, ಆರಂಭಿಕ ಹಂತದಲ್ಲಿ 2.3 ಲಕ್ಷ ರೂಪಾಯಿಗೆ ಲಭ್ಯವಿರಬಹುದು ಎಂದು ವರದಿಗಳು ತಿಳಿಸುತ್ತಿವೆ.
ಟಿಯಾಂಜಿನ್ ಅಂತಾರಾಷ್ಟ್ರೀಯ ಆಟೋ ಪ್ರದರ್ಶನದ 2021ರ ಅವತರಣಿಕೆಯಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ.
ಎಚ್ಚರ..! ನಿಮ್ಮ ಫೋನ್ ನಲ್ಲಿಯೂ ಈ ಅಪ್ಲಿಕೇಷನ್ ಇದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ
ಇಬ್ಬರು ಪ್ರಯಾಣಿಸಬಲ್ಲ ಈ ಕಾರು ಅತ್ಯಂತ ಕಡಿಮೆ ವ್ಯಾಸದಲ್ಲಿ ತಿರುಗಬಲ್ಲದಾಗಿದ್ದು, ಕಡಿಮೆ ವೇಗದಲ್ಲಿ ಚಲಿಸಬೇಕಾದಂಥ ನಗರದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ.
ಲಿಥಿಯಂ ಅಯಾನ್ ಬ್ಯಾಟರಿ ಚಾಲಿತ ಕಾರು 2,497 ಮಿಮೀ ಉದ್ದವಿದ್ದು, 1,526 ಮಿಮೀ ಅಗಲ ಹಾಗೂ 1,616 ಮಿಮೀ ಎತ್ತರವಿದೆ. 85ನ್ಯೂಟನ್ ಮೀಟರ್ನಷ್ಟು ಟಾರ್ಕ್ ಉತ್ಪಾದಿಸಬಲ್ಲ 33 ಪಿಎಸ್ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಈ ಕಾರು ಒಂದು ಚಾರ್ಜ್ನಲ್ಲಿ 300 ಕಿಮೀ ಚಲಿಸಬಲ್ಲದು.
ಅಕ್ಟೋಬರ್ ನಲ್ಲಿ ಪ್ರತಿ ದಿನ 1 ಕೋಟಿ ಲಸಿಕೆ ನೀಡಲು ನಡೆದಿದೆ ತಯಾರಿ
ವುಲಿನ್ ಹಾಂಗ್ಗುವಾಂಗ್ನ ಮಿನಿ ಹೆಸರಿನ ಇವಿ ಕಾರು ಅದಾಗಲೇ ಒಂದು ಲಕ್ಷಕ್ಕೂ ಅಧಿಕ ಘಟಕಗಳ ಮಾರಾಟ ಕಂಡಿದ್ದು, ಚೀನಾದಲ್ಲಿ ಭಾರೀ ಹವಾ ಎಬ್ಬಿಸಿದೆ.