ಭಾರತೀಯ ಮಾರುಕಟ್ಟೆಗೆ ಮತ್ತೊಂದು ಪ್ರೀಮಿಯಂ ಎಸ್‌ಯುವಿ ಪರಿಚಯಿಸಲಿರುವ ಟಾಟಾ ಮೋಟರ್ಸ್, ’ಬ್ಲಾಕ್‌ಬರ್ಡ್’ ಕೋಡ್ ಹೆಸರಿನಲ್ಲಿ ಮಧ್ಯಂತರ ಗಾತ್ರದ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧವಾಗಿದೆ.
ಈ ಕಾರಿನ ಚಿತ್ರಗಳು ಇತ್ತೀಚೆಗೆ ಆನ್ಲೈನ್‌ನಲ್ಲಿ ತೇಲಾಡುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಹ್ಯೂಂಡಾಯ್‌ನ ಕ್ರೇಟಾ, ಕಿಯಾದ ಸೆಲ್ಟೋಸ್, ನಿಸ್ಸಾನ್‌ನ ಕಿಕ್ಸ್ ಹಾಗೂ ರೆನೌ ಡಸ್ಟರ್‌ಗಳೊಂದಿಗೆ ಈ ಎಸ್‌ಯುವಿ ಸ್ಫರ್ಧಿಸುವ ಸಾಧ್ಯತೆ ಇದೆ.
ಎಚ್ಚರ..! ನಿಮ್ಮ ಫೋನ್ ನಲ್ಲಿಯೂ ಈ ಅಪ್ಲಿಕೇಷನ್ ಇದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ
ಈ ಕಾರಿನ ಆರಂಭಿಕ ಬೆಲೆಯು 10 ಲಕ್ಷ ರೂ.ಗಳಷ್ಟಿರಲಿದೆ. ಹ್ಯಾರಿಯರ್ ಹಾಗೂ ಸಫಾರಿಗಳಂತೆ ಎಲ್‌ಇಡಿ ಪ್ಲಾಟ್‌ಫಾರಂಗಳನ್ನು ಹೊಂದಿರುವ ಈ ಕಾರು ಆಲ್ಫಾ ಪ್ಲಾಟ್‌ಫಾರಂಗಳನ್ನು ಹೊಂದುವ ಸಾಧ್ಯತೆ ಇದೆ. ನೆಕ್ಸಾನ್ ಹಾಗೂ ಆಲ್ಟ್ರೋಜ಼್‌ಗಳಲ್ಲಿ ಈ ಪ್ಲಾಟ್‌ಫಾರಂ ಲಭ್ಯವಿದೆ.
1200 ಸಿಸಿ ಟರ್ಬೋ ಪೆಟ್ರೋಲ್ ಇಂಜಿನ್ ಜೊತೆಗೆ 1500 ಸಿಸಿ ಡೀಸೆಲ್ ಇಂಜಿನ್‌ಗಳಲ್ಲಿ ನೆಕ್ಸಾನ್ ಲಭ್ಯವಿದೆ.
ಸನ್‌ರೂಫ್, ವೆಂಟಿಲೇಟೆಡ್ ಆಸನಗಳು, ಬೃಹತ್ ಟಚ್‌ಸ್ಕ್ರೀನ್ ಆಡಿಯೋ ಸಿಸ್ಟಂ, ಡಿಜಿಟಲ್ ಉಪಕರಣದ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್‌ಗಳು ಸಹ ಕಾರಿನಲ್ಲಿ ಲಭ್ಯವಿದ್ದು, 2022ರಲ್ಲಿ ಈ ಕಾರು ರಸ್ತೆಗೆ ಇಳಿಯುವ ನಿರೀಕ್ಷೆ ಇದೆ.