alex Certify ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!

ಹಿರಿಯ ಗಾಯಕಿ ಗ್ಲೋರಿಯಾ ಎಸ್ಟೆಫಾನ್​ ಬಾಲ್ಯದಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ರೆಡ್​ ಟೇಬಲ್​ ಟಾಕ್ : ದಿ ಎಸ್ಟೆಫನ್ಸ್​​ನಲ್ಲಿ ಗ್ಲೋರಿಯಾ ಈ ಶಾಕಿಂಗ್​ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ 9ನೇ ವರ್ಷದಲ್ಲಿ ತಾಯಿಯ ನಂಬಿಗಸ್ಥ ವ್ಯಕ್ತಿಯೊಬ್ಬ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಹೇಳಿಕೊಂಡಿದ್ದಾಳೆ.

ಆತ ನಮ್ಮ ಕುಟುಂಬದವನಾಗಿದ್ದ. ಹಾಗಂತ ತೀರ ಹತ್ತಿರದವನೂ ಅಲ್ಲ. ನನ್ನ ತಾಯಿ ನನ್ನನ್ನು ಸಂಗೀತ ಶಾಲೆಗೆ ಸೇರಿಸಿದ್ದರಿಂದ ಆತ ಅಧಿಕಾರದ ಸ್ಥಾನದಲ್ಲಿದ್ದ. ನಾನು ಎಷ್ಟು ಪ್ರತಿಭಾನ್ವಿತೆ, ನನಗೆ ಯಾಕೆ ವಿಶೇಷ ಗಮನ ನೀಡಬೇಕು ಎಂಬೆಲ್ಲದರ ಬಗ್ಗೆ ತನ್ನ ತಾಯಿಗೆ ಹೇಳಲು ಆರಂಭಿಸಿದ್ದ. ಕೊನೆಗೆ ಆತ ನನಗೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ. ಇದು ತಪ್ಪು ಎಂದು ನಾನು ಹೇಳಿದ್ದೆ. ಆದರೆ ಆತ ನಿನ್ನ ತಂದೆ ವಿಯೆಟ್ನಾಂನಲ್ಲಿದ್ದಾರೆ. ನಿನ್ನ ತಾಯಿ ಒಬ್ಬರೇ ಇರುತ್ತಾರೆ. ನೀನು ತಾಯಿಗೆ ಈ ವಿಚಾರ ಹೇಳಿದರೆ ನಾನು ಅವರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ಎಂದು ದುಷ್ಕರ್ಮಿಯ ಹೆಸರನ್ನು ಹೇಳದೇ ಗ್ಲೋರಿಯಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ನನ್ನ ತಾಯಿ ಪೊಲೀಸರಿಗೆ ದೂರನ್ನು ನೀಡಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸದಂತೆ ಮನವೊಲಿಸಿದರು ಎಂದು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...