alex Certify BIG NEWS: ‘ಅಣ್ಣಾ…..ನಿನಗೆ ಹೆಂಡತಿ, ಮಗಳು, ಸಹೋದರಿಯರಿದ್ದಾರೆ; ನೀನ್ಯಾರ ಬಗ್ಗೆ ಮಾತನಾಡಿದ್ದೀಯಾ ವಿಮರ್ಶೆ ಮಾಡಿಕೋ…’ ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಅಣ್ಣಾ…..ನಿನಗೆ ಹೆಂಡತಿ, ಮಗಳು, ಸಹೋದರಿಯರಿದ್ದಾರೆ; ನೀನ್ಯಾರ ಬಗ್ಗೆ ಮಾತನಾಡಿದ್ದೀಯಾ ವಿಮರ್ಶೆ ಮಾಡಿಕೋ…’ ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ‘ನೈಟ್ ಪಾಲಿಟಿಕ್ಸ್’ ಹೇಳಿಕೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನನ್ನ ವಿರುದ್ಧ ಹೇಳಿಕೆ ನೀಡುವ ಮೊದಲು ಅವರನ್ನು ಅವರು ವಿಮರ್ಶೆ ಮಾಡಿಕೊಳ್ಳಲಿ ಎಂದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ರಾತ್ರಿ ರಾಜಕಾರಣದಿಂದ ಗೆದ್ದು ಶಾಸಕಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಜಯ್ ಅಣ್ಣ ನಿನಗೆ ಹೆಂಡತಿ ಇದ್ದಾಳೆ, ಮಗಳಿದ್ದಾಳೆ, ತಾಯಿ, ಸಹೋದರಿಯರೂ ಇದ್ದಾರೆ…..ಹೀಗಾಗಿ ಇಂಥ ಹೇಳಿಕೆ ನೀಡಿರುವ ನೀನು ಯಾರ ಬಗ್ಗೆ ಹೇಳಿಕೆ ನೀಡಿದೆ ಎಂಬುದನ್ನು ನಿನ್ನನ್ನೇ ನೀನು ವಿಮರ್ಶೆ ಮಾಡಿಕೋ…..ಎಂದು ತಿರುಗೇಟು ನೀಡಿದರು.

ನಾನು ಯಾರ ಮೇಲೂ ಚಾಲೇಂಜ್ ಮಾಡಲ್ಲ, ಹಾಗಂತ ಸುಮ್ಮನೇ ಕುಳಿತುಕೊಳ್ಳುವವಳೂ ಅಲ್ಲ. ನಾನು ಜನರ ಆಶಿರ್ವಾದದಿಂದ ಗೆದ್ದು ಶಾಸಕಿಯಾಗಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಮುಂದೆ ಜನ ಬೆಂಬಲವಿದ್ದರೆ, ಅವರು ಆಶೀರ್ವದಿಸಿದರೆ ಸಚಿವೆಯೂ ಆಗುತ್ತೇನೆ ಎಂದರು.

ಸಂಜಯ್ ಪಾಟೀಲ್ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್ ಅವರನ್ನು ಪ್ರಶ್ನಿಸುತ್ತಿದ್ದೇನೆ. ಇದು ನಿಮ್ಮ ಪಕ್ಷದ ಶಿಸ್ತು, ಸಂಸ್ಕೃತಿಯೇ ? ಈ ಬಗ್ಗೆ ಬಿಜೆಪಿ ನಾಯಕರು ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...