ಆಹಾರದಲ್ಲಿ ಥರಾವರಿ ಆವಿಷ್ಕಾರಗಳು ಇಂದಿನ ಕಲರ್‌ಫುಲ್ ರೆಸ್ಟೋರೆಂಟ್‌ಗಳ ಯುಗದಲ್ಲಿ ದಿನನಿತ್ಯದ ಕ್ರಿಯೆಯಾಗಿಬಿಟ್ಟಿವೆ.
ಬೆಂಗಳೂರಿನ ರೆಸ್ಟೋರೆಂಟ್ ಒಂದು ಇಡ್ಲಿಯನ್ನು ಐಸ್‌ಕ್ರೀಂ ಸ್ಟಿಕ್‌ನಲ್ಲಿ ತನ್ನ ಗ್ರಾಹಕರಿಗೆ ಉಣಬಡಿಸುವ ಮೂಲಕ ನೆಟ್ಟಿಗ ಲೋಕದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಕಡ್ಡಿಗಳಿರುವ ಮೂರು ಇಡ್ಲಿಗಳು ತಟ್ಟೆಯಲ್ಲಿದ್ದರೆ ಮತ್ತೊಂದು ಇಡ್ಲಿಯನ್ನು ಸಂಬಾರ್‌ನಲ್ಲಿ ಡಿಪ್ ಮಾಡಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಜೊತೆಯಲ್ಲಿ ತೆಂಗಿನಕಾಯಿ ಚಟ್ನಿಯೂ ಇದೆ. ಈ ಆವಿಷ್ಕಾರವು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
BIG BREAKING; 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿ; ಅಧಿಸೂಚನೆ ಪ್ರಕಟ
“ದಯವಿಟ್ಟು ಇಡ್ಲಿಯನ್ನು ತನ್ನ ಪಾಡಿಗೆ ಇರಲು ಬಿಟ್ಟುಬಿಡಿ. ದೋಸೆಯನ್ನು ಕ್ರಿಯಾಶೀಲತೆ ಹೆಸರಿನಲ್ಲಿ ಅದಾಗಲೇ ಬಹಳಷ್ಟು ಹಾಳು ಮಾಡಿಯಾಗಿದೆ. ಈಗ ಇಡ್ಲಿಯನ್ನೂ ಹಾಳು ಮಾಡಲು ಬರಬೇಡಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಒಂದೆಡೆ ಜನರು ಮರಗಳನ್ನು ಸಂರಕ್ಷಿಸಲು ಯತ್ನಿಸುತ್ತಿದ್ದರೆ ಈ ಕಡೆ ಕ್ರಿಯಾಶೀಲತೆ ಹೆಸರಿನಲ್ಲಿ ಅನಗತ್ಯವಾಗಿ ಹೀಗೆ ಆ ಕಡ್ಡಿಗಳನ್ನು ವ್ಯರ್ಥ ಮಾಡುತ್ತಿದ್ದಾರೆ” ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ.
https://twitter.com/mshindhe/status/1443596247625912320?ref_src=twsrc%5Etfw%7Ctwcamp%5Etweetembed%7Ctwterm%5E1443596247625912320%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbengaluru-restaurant-serves-idli-on-ice-cream-stick-and-foodies-have-opinions-4268126.html