alex Certify ಪೊಲೀಸ್ ಬಲೆಗೆ ಬೀಳಲು ಕಾರಣವಾಯ್ತು ಉಗ್ರನ ‘ಕಬಾಬ್’ ಮೇಲಿನ ಪ್ರೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಬಲೆಗೆ ಬೀಳಲು ಕಾರಣವಾಯ್ತು ಉಗ್ರನ ‘ಕಬಾಬ್’ ಮೇಲಿನ ಪ್ರೀತಿ….!

ಅತಿಯಾಗಿ ತಿಂದರೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಲು ಆರಂಭಿಸುತ್ತವೆ. ಸ್ಥೂಲಕಾಯ ಸಮಸ್ಯೆಯು ಕೇವಲ ದೇಹದ ಆರೋಗ್ಯವನ್ನು ಹದಗೆಡಿಸುವುದು ಒಂದಡೆಯಾದರೆ ನಿಮ್ಮನ್ನು ಪೊಲೀಸರು ಬಂಧಿಸಲು ಕೂಡ ಇದೇ ಕಾರಣವಾಗಬಹುದು..!

ಅರೆ..! ಇದೇನಿದು ಅತಿಯಾಗಿ ತಿಂದರೆ ಪೊಲೀಸರು ಏಕೆ ಬಂಧಿಸುತ್ತಾರೆ..? ಎಂದೆನಿಸಬಹುದು. ಆದರೆ ಬ್ರಿಟಿಷ್​​ನ ಶಂಕಿತ ಭಯೋತ್ಪಾದಕನೊಬ್ಬ ತನ್ನ ಅತಿಯಾದ ಕಬಾಬ್​ ಆಸೆಯಿಂದಲೇ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ.

ಕಬಾಬ್ ಮೇಲಿನ ಅತಿಯಾದ ಮೋಹದಿಂದಾಗಿ 31 ವರ್ಷದ ಅಬ್ದುಲ್ ಮಜೀದ್​ ಎಷ್ಟು ದಪ್ಪಗಾಗಿದ್ದ ಅಂದರೆ ಆತನನ್ನು ಕಂಡು ಹಿಡಿಯಲು ಪೊಲೀಸರು ಆತನ ಕಿವಿಯನ್ನು ಬಳಸಿಕೊಂಡಿದ್ದಾರೆ.

ಅಬ್ದುಲ್​ ಮಜೀದ್​​ ಅಲ್ಜೀರಿಯಾದಿಂದ ಸಿರಿಯಾಗೆ ಪರಾರಿಯಾಗಿದ್ದ. ಅಲ್ಲಿ ಕಬಾಬ್​ ಆರ್ಡರ್​ ಮಾಡಿದ ಸುಳಿವನ್ನೇ ಇಟ್ಟುಕೊಂಡು ಪೊಲೀಸ್ ಮಜೀದ್​ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.‌

ಸಾಮಾಜಿಕ ಮಾಧ್ಯಮದ ಪೋಸ್ಟ್​ನಿಂದಾಗಿ ಶಂಕಿತರು ಆನ್​ಲೈನ್​ನಲ್ಲಿ ಕಬಾಬ್​ ಆರ್ಡರ್​ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು. ಆಗ್ನೇಯ ಸ್ಪೇನ್​ನ ಅಲ್ಮೇರಿಯಾದಲ್ಲಿ ಕಬಾಬ್ ಸ್ವೀಕರಿಸುತ್ತಿದ್ದ ವೇಳೆಯೇ ಪೊಲೀಸರು ಶಂಕಿತರನ್ನು ಸೆರೆ ಹಿಡಿದಿದ್ದಾರೆ.

ಬಂಧನಕ್ಕೆ ಒಳಗಾಗುವ ಐದು ದಿನಗಳ ಮುಂಚೆ ಅಂದರೆ 2020ರ ಏಪ್ರಿಲ್​ 15ರಂದು ಸಿದ್ದಿಕಿ ಕಬಾಬ್​ ಶಾಪ್​ನಿಂದ ಆರ್ಡರ್​ ಪಡೆದಿದ್ದ ಎನ್ನಲಾಗಿದೆ. ಆದರೆ ಕಬಾಬ್​ ತಿಂದು ತಿಂದು ಸಿದ್ದಕಿ ತುಂಬಾ ದಪ್ಪಗಾಗಿದ್ದ. ಅವನನ್ನು ಗುರುತಿಸುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಪೊಲೀಸರು ಕಿವಿಯ ಸಹಾಯದಿಂದ ಆತನನ್ನು ಪತ್ತೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...