ಕಿರುತೆರೆ ನಟಿ ಚಹತ್ ಖನ್ನಾ ಹಾಗೂ ಆಕೆ ಪತಿ ಫರ್ಹಾನ್ ಶಾರುಖ್ ಮಿರ್ಜಾ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಫರ್ಹಾನ್ ಮಿರ್ಜಾಗೆ ನೆಮ್ಮದಿ ಸುದ್ದಿ ನೀಡಿದೆ. ಫರ್ಹಾನ್ ಬಂಧಿಸುವ ಅಗತ್ಯವಿಲ್ಲವೆಂದು ಕೋರ್ಟ್ ಹೇಳಿದೆ.
ನವೆಂಬರ್ 8ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಿರ್ಜಾ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಚಹತ್ ಖನ್ನಾ ಜನಪ್ರಿಯ ಟಿವಿ ನಟಿ. ಅನೇಕ ಜನಪ್ರಿಯ ಟಿವಿ ಕಾರ್ಯಕ್ರಮಗಳ ಪಾಲ್ಗೊಂಡಿದ್ದಾರೆ.
ಚಹತ್ ಖನ್ನಾ, ಪತಿಯ ವಿರುದ್ಧ ಅತ್ಯಾಚಾರ ಮತ್ತು ಅಸಹಜ ಲೈಂಗಿಕತೆ ಕ್ರಿಯೆ ಆರೋಪ ಹೊರಿಸಿದ್ದರು. ಚಹತ್ ಖನ್ನಾ, ಅಸಹಜ ಲೈಂಗಿಕ ಕ್ರಿಯೆ ನಡೆಸುವ ಜೊತೆಗೆ ಅದ್ರ ವಿಡಿಯೋ ಮಾಡಿದ್ದಾರೆಂದು ಆರೋಪ ಮಾಡಿದ್ದರು. ಚಹತ್ ಖನ್ನಾ, ಬಡೇ ಅಚ್ಛೇ ಲಗ್ತೆ ಹೇ ಮೂಲಕ ಜನಪ್ರಿಯತೆ ಗಳಿಸಿದ್ದರು. ಇಬ್ಬರು ಮಕ್ಕಳ ತಾಯಿ ಚಹತ್ ಖನ್ನಾ, ಬಟ್ಟೆ ವ್ಯಾಪಾರವನ್ನೂ ಮಾಡುತ್ತಿದ್ದಾರೆ. ಈವರೆಗೆ ಎರಡು ಮದುವೆಯಾಗಿರುವ ಚಹತ್ ಖನ್ನಾ, ಇಬ್ಬರಿಂದಲೂ ದೂರವಿದ್ದಾರೆ.