ನವದೆಹಲಿ: ಏರ್ ಇಂಡಿಯಾ ಇದೀಗ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ.
ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾ ಖರೀದಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಈ ಮೂಲಕ ಎಐ ನ್ನು ಮತ್ತೆ ಟಾಟಾ ಗ್ರೂಪ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ಮೊದಲು ಇಂಡಿಯನ್ ಏರ್ ಲೈನ್ಸ್ ಆರಂಭಿಸಿದ್ದ ಟಾಟಾ ಗ್ರೂಪ್ ಇದೀಗ ಏರ್ ಇಂಡಿಯಾ ಮತ್ತೆ ಟಾಟಾ ಕಂಪನಿ ತೆಕ್ಕೆಗೆ ಬಂದಿದೆ. ಈಗಾಗಲೇ ವಿಸ್ತಾರ, ಏರ್ ಏಷ್ಯಾದಲ್ಲಿ ಟಾಟಾ ಪಾಲುದಾರಿಕೆ ಹೊಂದಿದ್ದು, ಈಗ ಮೂರನೇ ಏರ್ ಲೈನ್ಸ್ ನ್ನು ಕೂಡ ತನ್ನ ಸುಪರ್ದಿಗೆ ಪಡೆದಿದೆ.