
ಮದ್ಯದ ನಶೆಯಲ್ಲಿದ್ದಾಗ ಏನು ಮಾಡಿದ್ದೇವೆ ಎಂಬ ಅರಿವಿರುವುದಿಲ್ಲ. ಮದ್ಯದ ನಶೆಯಲ್ಲಿ ಮನುಷ್ಯ ಒಬ್ಬನ ಪ್ರಾಣ ಕೂಡ ತೆಗೆಯಬಹುದು. ಇದಕ್ಕೆ ಇಂಗ್ಲೆಂಡ್‌ನ ಡಾರ್ಲಿಂಗ್‌ಟನ್‌ನಲ್ಲಿ ನಡೆದ ಘಟನೆ ಸಾಕ್ಷಿ. ಮದ್ಯದ ನಶೆಯಲ್ಲಿ ಪ್ರೇಮಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ವ್ಯಕ್ತಿ ಆಕೆಯ ಕತ್ತು ಹಿಸುಕಿದ್ದಾನೆ.
ಈ ಪ್ರಕರಣದ ವಿಚಾರಣೆ ನಡೆಸಿದ ಟೈಸೈಡ್ ಕ್ರೌನ್ ಕೋರ್ಟ್, ಅಪರಾಧಿಗೆ ಐದು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಿತ್ತು. ಇದನ್ನು ಅಟಾರ್ನಿ ಜನರಲ್ ಪ್ರಶ್ನಿಸಿದ್ದಾರೆ. ಇದ್ರಿಂದಾಗಿ ಅಪರಾಧಿಗೆ ಶಿಕ್ಷೆ ಹೆಚ್ಚಾಗುವ ಸಾಧ್ಯತೆಯಿದೆ.
ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಬಾಯ್ ಫ್ರೆಂಡ್ ಸೇರಿ ಇಬ್ಬರು ಅರೆಸ್ಟ್
ಡಾರ್ಲಿಂಗ್ಟನ್ ನ ಸ್ಯಾಮ್ ಪೈಬಸ್, ಕಳೆದ ತಿಂಗಳು ತನ್ನ ಗೆಳತಿ ಸೋಫಿ ಮಾಸ್ ಹತ್ಯೆ ಮಾಡಿದ್ದ. ಪೈಬಸ್ ವಿವಾಹಿತ. ಆತನ ಪ್ರೇಯಸಿ ಕೂಡ ಎರಡು ಮಕ್ಕಳ ತಾಯಿ. ಘಟನೆ ದಿನ ಪೈಬಸ್, 24 ಬಾಟಲ್ ಬಿಯರ್ ಸೇವನೆ ಮಾಡಿದ್ದನಂತೆ.
ಕುಡಿದ ಮತ್ತಿನಲ್ಲಿ ಪ್ರೇಮಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದನಂತೆ. ಸಂಬಂಧ ಬೆಳೆಸುವ ವೇಳೆ ಹತ್ತು ಸೆಕೆಂಡ್ ಗಳ ಕಾಲ, ಪ್ರೇಯಸಿ ಕತ್ತು ಒತ್ತಿದ್ದಾನೆ. ಇದ್ರಿಂದ ಆಕೆ ಸಾವನ್ನಪ್ಪಿದ್ದಾಳೆ. ಆದ್ರೆ ಇದು ಪೈಬರ್ ಗೆ ತಿಳಿದಿರಲಿಲ್ಲ.
ಹುಬ್ಬೇರಿಸುವಂತಿದೆ ಕುಬೇರರ ಡೈಲಿ ಆದಾಯ: ದಿನಕ್ಕೆ ಅಂಬಾನಿಗೆ 163 ಕೋಟಿ, ಅದಾನಿಗೆ 1 ಸಾವಿರ ಕೋಟಿ ರೂ. ಇನ್ ಕಂ
ಬೆಳಿಗ್ಗೆ ಎದ್ದಾಗ ಪೈಬರ್ ಗೆ ಸತ್ಯ ಗೊತ್ತಾಗಿದೆ. 999 ಗೆ ಕರೆ ಮಾಡುವ ಬದಲು, ಕಾರಿನಲ್ಲಿ 10 ನಿಮಿಷ ಮುಂದೇನು ಮಾಡಬೇಕೆಂದು ಆಲೋಚನೆ ಮಾಡಿ, ನಂತ್ರ ಪೊಲೀಸರಿಗೆ ಶರಣಾಗಿದ್ದ ಎನ್ನಲಾಗಿದೆ. ಆ ದಿನ ಏನು ನಡೆಯಿತು ಎಂಬುದು ನನಗೆ ಸರಿಯಾಗಿ ತಿಳಿದಿಲ್ಲವೆಂದು ಆತ ಹೇಳಿದ್ದಾನೆ.