alex Certify ಇಂದು ‘ಮದಗಜ’ ಚಿತ್ರತಂಡ ನೀಡಲಿದೆ ಹೊಸ ಅಪ್ ಡೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಮದಗಜ’ ಚಿತ್ರತಂಡ ನೀಡಲಿದೆ ಹೊಸ ಅಪ್ ಡೇಟ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ‘ಮದಗಜ’ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಇಂದು ಸಂಜೆ 5-05ಕ್ಕೆ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಲು ಮದಗಜ ಚಿತ್ರತಂಡ ನಿರ್ಧರಿಸಿದೆ. ಇದುವರೆಗೂ ಈ ಸಿನಿಮಾದ ಯಾವ ಹಾಡನ್ನು ರಿಲೀಸ್ ಮಾಡಿಲ್ಲ ಆಗಾಗಿ ಈ ಚಿತ್ರದ ಬಿಡುಗಡೆ ದಿನಾಂಕ ಅಥವಾ ಮೊದಲನೇ ಹಾಡಿನ ಘೋಷಣೆ ಮಾಡುವ ಸಾಧ್ಯತೆಯಿದೆ.

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ: ರಕ್ತ ನೀಡುವ ಮೊದಲು ನಿಮಗಿದು ತಿಳಿದಿರಲಿ

ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಇವರ ಎರಡು ಲುಕ್ ಗಳು ಬಿಡುಗಡೆಯಾಗಿವೆ. ಒಂದರಲ್ಲಿ ಹಳ್ಳಿ ಹುಡುಗಿಯಾಗಿ ಹಾಗೂ ಇನ್ನೊಂದರಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಟ ಶ್ರೀಮುರಳಿ ʼಭರಾಟೆʼ ಸಿನಿಮಾ ಬಳಿಕ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...